Suresh Raina | ಐಪಿಎಲ್ ನಲ್ಲಿ ಮತ್ತೆ ಬ್ಯಾಟ್ ಬೀಸಲ್ವಾ ರೈನಾ..?
ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಶೀಘ್ರದಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.
ಧೋನಿ ಜೊತೆಗೆ ಸುರೇಶ್ ರೈನಾ ಕೂಡ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ತಿಳಿದಿರುವ ವಿಚಾರವೇ. ಆದರೆ ಅವರು ಐಪಿಎಲ್‌ನಲ್ಲಿ ತಮ್ಮ ಆಟ ಮುಂದುವರೆಸಿದ್ದರು.
ಆದಾಗ್ಯೂ, ಇಂಡಿಯನ್ ಪ್ರಿಮಿಯರ್ ಲೀಗ್ ನ 15ನೇ ಆವೃತ್ತಿಯ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ.
ಹೀಗಾಗಿ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಮೆಗಾಹರಾಜಿನಲ್ಲಿ ಅನ್ ಸೋಲ್ಡ್ ಆದರು.
ಇದು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ.
ಮುಖ್ಯವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ನುಂಗಲಾದ ತುತ್ತಾಗಿದೆ.
ಈ ನಡುವೆ ಸುರೇಶ್ ರೈನಾ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕಾಮೆಂಟೇಟರ್ ಆಗಿ ಹೊಸ ಅವತಾರವನ್ನೆತ್ತಿದ್ದಾರೆ.
ಸುರೇಶ್ ರೈನಾ ಜೊತೆಗೆ ಪಿಯೂಷ್ ಚಾವ್ಲಾ, ಧವಳ್ ಕುಲಕರ್ಣಿ, ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಹರ್ಭಜನ್ ಸಿಂಗ್ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕಾಮೆಂಟರಿ ಪ್ಯಾನೆಲ್ ಗೆ ಸೇರಿದ್ದಾರೆ.
ಇದು ಹೀಗಿದ್ದರೇ ಸುರೇಶ್ ರೈನಾ 11 ಸೀಸನ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಜೊತೆಗೆ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕನೂ ಆಗಿದ್ದರು.
ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಸುರೇಶ್ ರೈನಾ, ತಮ್ಮ ವಯಸ್ಸಿನ ಕಾರಣದಿಂದಾಗಿ ಕ್ರಿಕೆಟ್ ನಿಂದ ದೂರ ಇರಬೇಕು ಎಂದು ಭಾವಿಸಿದ್ದಾರಂತೆ.
ಇನ್ನು 35 ವರ್ಷದ ಸುರೇಶ್ ರೈನಾ, ಐಪಿಎಲ್ ನಲ್ಲಿ ಇದುವರೆಗೆ 205 ಪಂದ್ಯಗಳನ್ನಾಡಿದ್ದಾರೆ. 5528 ರನ್ ಗಳಿಸಿದ್ದಾರೆ.









