121 ವರ್ಷಗಳ ಹಿಂದಿನ ಬಿಸಿಲು ಮಾರ್ಚ್ ತಿಂಗಳಲ್ಲಿ ದಾಖಲು
ಕಳೆದ ಮಾರ್ಚ್ ತಿಂಗಳು ಕಂಡು ಬಂದ ಬಿಸಿಲು 121 ವರ್ಷಗಳ ಹಳೆದ ದಾಖಲೆಯನ್ನ ಮುರಿದಿದೆ ಎಂದು ಭಾರತೀಯ ಹವಮಾನ ಇಲಾಖೆ ಹೇಳಿದೆ. ದೀರ್ಘಾವಧಿಯ ಓಣ ಹವೆಯು ವಾಯುವ್ಯ ಭಾರತದಲ್ಲಿ ತೀವ್ರವಾದ ತಾಪಮಾನ ಏರಿಕೆಗೆ ಕಾರಣವಾಗಿದೆ. ಮಾರ್ಚ್ 2022ರ ತಿಂಗಳು 1901 ನಂತರ ದೇಶದಲ್ಲಿ ದಾಖಲಾದ ಅತ್ಯಂತ ಬಿಸಿಲಿನ ಮಾರ್ಚ್ ಆಗಿತ್ತು ಎಂದು IMD ಡೇಟಾ ಪ್ರಕಾರ ತಿಳಿದು ಬಂದಿದೆ
ದೆಹಲಿಯ ಕೆಲವು ಭಾಗಗಳಲ್ಲಿ ಗುರುವಾರ (ಮಾರ್ಚ್ 31) ತೀವ್ರ ಶಾಖದ ಅಲೆ ಎದ್ದಿದ್ದು ಗರಿಷ್ಠ ತಾಪಮಾನವು 41 ಡಿಗ್ರಿ ಗಡಿ ದಾಟಿದೆ. ಶುಕ್ರವಾರ, ರಾಜಧಾನಿಯಲ್ಲಿ ದಾಖಲಾದ ಗರಿಷ್ಠ ತಾಪಮಾನವು 36.5 ಡಿಗ್ರಿ ಸೆಲ್ಸಿಯಸ್. ಆಗಿದೆ, ಇದು ಸಾಮಾನ್ಯ ಬಿಸಿಲಿಗಿಂತ ಮೂರು ಹಂತಗಳಿಗಿಂತ ಹೆಚ್ಚಾಗಿದೆ ಎಂದು ಐಎಂಡಿ ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ಎರಡು ಬಿಸಿಗಾಳಿಗಳಿಗೆ ಉತ್ತರ ಭಾರತ ಸಾಕ್ಷಿಯಾಯಿತು, ಮೊದಲನೆಯದು ಮಾರ್ಚ್ 11 ಮತ್ತು ಮಾರ್ಚ್ 21 ರ ನಡುವೆ, ಎರಡನೆಯದು ಮಾರ್ಚ್ 26 ರಂದು ಪ್ರಾರಂಭವಾಯಿತು ಇನ್ನೂ ಮುಂದುವರೆದಿದೆ. ಪುಣೆಯ IMD ಮುಖ್ಯಸ್ಥ ಶ್ರೀಜಿತ್ ಪ್ರಕರ ಮಳೆಯ ಕೊರತೆ ಈ ತೀವ್ರ ಶಾಖಕ್ಕೆ ಒಂದು ಕಾರಣವಾಗಿದೆ ಎಂದು ಹೇಳಿದ್ದಾರೆ. “








