MI VS RR : 10 ಸಾವಿರ ರನ್ ಗಡಿದಾಟಲು ರೋಹಿತ್ ಗೆ ಬೇಕು 64 ರನ್ಸ್..!!
ಮುಂಬೈ ಇಂಡಿಯನ್ಸ್ ನಾಯಕ ಹಾಗೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೊಂದು ಅಪರೂಪದ ಮೈಲುಗಲ್ಲು ತಲುಪುವ ಸನಿಹದಲ್ಲಿದ್ದಾರೆ.
IPL 2022 ಸೀಸನ್‌ನ ಭಾಗವಾಗಿ ಶನಿವಾರ (ಏಪ್ರಿಲ್ 2) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಿಟ್‌ಮ್ಯಾನ್ ಇನ್ನೂ 64 ರನ್ ಗಳಿಸಿದರೆ, ಅವರು T20 ನಲ್ಲಿ 10000 ರನ್ ಗಳ ಮಾರ್ಕ್ ದಾಟಲಿದ್ದಾರೆ.
ಈ ಹಿಂದೆ ಟೀಂ ಇಂಡಿಯಾದಿಂದ ವಿರಾಟ್ ಕೊಹ್ಲಿ ಸೇರಿ ಐವರು ಮಾತ್ರ ಈ ಅಪರೂಪದ ಮೈಲಿಗಲ್ಲನ್ನು ತಲುಪಲು ಯಶಸ್ವಿಯಾಗಿದ್ದರು.
ವಿಂಡೀಸ್‌ನ ವಿಧ್ವಂಸಕ ಯೋಧ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 14562 ರನ್‌ಗಳೊಂದಿಗೆ T20 ಗಳಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಪಾಕಿಸ್ತಾನದ ಅನುಭವಿ ಶೋಯೆಬ್ ಮಲಿಕ್ (472 ಪಂದ್ಯಗಳಲ್ಲಿ 11698 ರನ್), ವಿಂಡೀಸ್ ಆಲ್ ರೌಂಡರ್ 584 ಪಂದ್ಯದಲ್ಲಿ 10430 ರನ್ ಗಳಿಸಿದ್ದಾರೆ.
ಆಸೀಸ್ ಬ್ಯಾಟರ್ ಅರೋನ್ ಪಿಂಚ್ 347 ಪಂದ್ಯಗಳಲ್ಲಿ 10444 ರನ್ ಗಳಿಸಿದ್ದಾರೆ.
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 328 ಪಂದ್ಯಗಳಲ್ಲಿ 10326 ರನ್ಸ್ ಬಾರಿಸಿದ್ದಾರೆ.
ಆಸೀಸ್ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 10308 ರನ್ ಗಳೊಂದಿಗೆ ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
RR ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನೂ 64 ರನ್ ಗಳಿಸಿದರೆ, ಅವರು T20 ಗಳಲ್ಲಿ 10,000 ರನ್ ಗಳಿಸಿದ ಏಳನೇ ಬ್ಯಾಟ್ಸ್‌ಮನ್ ಮತ್ತು ಕಡಿಮೆ ಪಂದ್ಯಗಳಲ್ಲಿ (370) ಈ ಮಾರ್ಕ್ ಅನ್ನು ತಲುಪಿದ ಐದನೇ ಆಟಗಾರನಾಗುತ್ತಾರೆ.
ಸದ್ಯ ರೋಹಿತ್ 370 ಪಂದ್ಯಗಳಲ್ಲಿ 9936 ರನ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.
ರೋಹಿತ್ ಗಿಂತಲೂ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದವರಲ್ಲಿ ಗೇಲ್, ಕೊಹ್ಲಿ, ವಾರ್ನರ್ ಮತ್ತು ಫಿಂಚ್ ಇದ್ದಾರೆ.
ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಮಾದರಿಯಲ್ಲಿ 3313 ರನ್ಸ್ ಹಾಗೇ ಐಪಿಎಲ್‌ನಲ್ಲಿ (5652) ರನ್ಸ್ ಗಳಿಸಿದ್ಧಾರೆ.mi-vs-rr–rohit-sharma-64-runs-away-historic-milestone









