ಓಡುತ್ತಿರುವ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು
ಮಹಾರಾಷ್ಟ್ರ: ಓಡುತ್ತಿರುವ ರೈಲಿನಿಂದ ಸಹೋದರಿಯರಿಬ್ಬರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉರಳ್ ಪೊಲೀಸ್ ಠಾಣಾ ವ್ಯಾಪ್ತಿಯ ಮನಾರ್ಖೇಡ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಛತ್ತೀಸ್‌ಗಢ ಮೂಲದ ಬೇಬಿ ರಜಪೂತ್ ಮತ್ತು ಪೂಜಾ ಗಿರಿ ಮೃತ ದುರ್ದೈವಿಗಳು. ಇವರು ಮುಂಬೈ-ಕೋಲ್ಕತ್ತಾ ಮಾರ್ಗದ ರೈಲಿನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ರಾತ್ರಿ 9.30ರ ಸುಮಾರಿಗೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಅಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಅವರಿಬ್ಬರೂ ಸಮವಸ್ತ್ರದಲ್ಲಿದ್ದದ್ದು, ಬೇಬಿ ರಜಪೂತ್ ಮತ್ತು ಪೂಜಾ ಗಿರಿ ಮನೆಯಲ್ಲಿ ಜಗಳವಾಡಿಕೊಂಡು ಬಂದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಬೇಬಿ ರಜಪೂತ್ ಮತ್ತು ಪೂಜಾ ಗಿರಿ ಪರಸ್ಪರ ಸೋದರಸಂಬಂಧಿಗಳಾಗಿದ್ದು. ನಾಲ್ಕು ದಿನಗಳ ಹಿಂದೆ ITI ಗೆ ಹೋಗುವುದಾಗಿ ಬಾಲಕಿಯರು ಮನೆಯಲ್ಲಿ ಹೇಳಿ ಹೋಗಿದ್ದರು. ಆದರೆ ಅವರಿಬ್ಬರು ಮನೆಗೆ ವಾಪಸ್ ಆಗಿರಲಿಲ್ಲ. ದಿಂದ ಗಾಬರಿಗೊಂಡ ಕುಟುಂಬ ಚಾಪಾ ಪೊಲೀಸ್ ಠಾಣೆಗೆ ದೂರು ನೀಡಿತ್ತು.
ಮುಂಬೈ-ಕೋಲ್ಕತ್ತಾ ರೈಲಿನಲ್ಲಿ ಪೂಜಾ ಮತ್ತು ಬೇಬಿ ಪ್ರಯಾಣಿಸುತ್ತಿದ್ದಾಗ ಒಬ್ಬರ ನಂತರ ಒಬ್ಬರಂತೆ ರೈಲಿನಿಂದ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.








