ದೇವಾಲಯಗಳ ಮೇಲೆ ವಾಣಿಜ್ಯ ತೆರಿಗೆ ವಿಧಿಸದಂತೆ ಆದೇಶ
ಉತ್ತರ ಪ್ರದೇಶ: ಅಯೋಧ್ಯೆಯ ದೇವಾಲಯಗಳು ಮತ್ತು ಇತರ ದೇವಾಲಯಗಳ ಮೇಲೆ ವಾಣಿಜ್ಯ ತೆರಿಗೆಯನ್ನು ವಿಧಿಸದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶಿದ್ದಾರೆ.
ಎರಡನೇ ಅವಧಿಗೆ ರಾಜ್ಯದ ಉಸ್ತುವಾರಿ ವಹಿಸಿಕೊಂಡ ಅವರು ಅಯೋಧ್ಯೆಯ ದೇವಾಲಯಗಳು ಮತ್ತು ಇತರ ದೇವಾಲಯಗಳ ಮೇಲೆ ವಾಣಿಜ್ಯ ತೆರಿಗೆಯನ್ನು ವಿಧಿಸದಂತೆ ನಗರದ ಮುನ್ಸಿಪಲ್ ಕಾರ್ಪೊರೇಷನ್ ಗೆ ಅದೇಶಿಸಿದ್ದಾರೆ. ಇದು ದೇವಸ್ಥಾನಗಳ ಧರ್ಮಶಾಲೆಗಳು ಮತ್ತು ಧಾರ್ಮಿಕ ಸಂಘಟನೆಗಳಿಗೆ ಈ ವಿನಾಯಿತಿ ಅನ್ವಯಿಸಲಿವೆ.
ಅಲ್ಲದೇ ಅಯೋಧ್ಯೆಗೆ ಮೊದಲ ಭೇಟಿ ನೀಡಿದ ಆದಿತ್ಯನಾಥ್ ನಗರದ ದೇವಾಲಯದ ಪಟ್ಟಣದಲ್ಲಿ ಮುಂಬರುವ ರಾಮ ನವಮಿ ಮೇಳದ ಸಿದ್ಧತೆಯನ್ನು ಪರಿಶೀಲಿಸಿದರು.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ನಂತರ ನಡೆಯುವ ಜಾತ್ರೆಯಲ್ಲಿ ಸುಮಾರು 10 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ, ಆದಿತ್ಯನಾಥ್ ಅವರು ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಭಗವಾನ್ ರಾಮ ಮಂದಿರದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು.








