Rohit sharma | ಆಗ ತೀವ್ರ ನಿರಾಶೆಗೆ ತುತ್ತಾಗಿದ್ದೆ : ರೋಹಿತ್ ಶರ್ಮಾ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಇನ್ನೂ ಬೋನಿ ಮಾಡಿಲ್ಲ.
ಈ ಋತುವಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲುಂಡಿದೆ.
ಇಲ್ಲಿಯವರೆಗೂ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡವನ್ನ ರೋಹಿತ್ ಶರ್ಮಾ ಮತ್ತೆ ಚಾಂಪಿಯನ್ ಮಾಡ್ತಾರಾ ಅನ್ನೋದು ಸದ್ಯದ ಕುತೂಹಲವಾಗಿದೆ.
ಈ ನಡುವೆ ರೋಹಿತ್ ಶರ್ಮಾ ಅವರನ್ನ ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್ ಜೆಮಿಮಾ ರೋಡ್ರಿಗಸ್ ಸಂದರ್ಶನ ಮಾಡಿದ್ದಾರೆ.
ಈ ಸಂದರ್ಶನದಲ್ಲಿ ಜೆಮಿಯಾ ರೋಡ್ರಿಗಸ್ ಅವರನ್ನು ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಜೊತೆಗೆ 2011ರ ವಿಶ್ವಕಪ್ ಅನ್ನ ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ಅವರಿಗೆ ಪ್ರಶ್ನೆ ಕೇಳಿದ್ದಾರೆ.
ಜೆಮಿಯಾ ರೋಡ್ರಿಗಸ್ ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರಿಸುತ್ತಾ.. 11 ವರ್ಷಗಳ ಹಿಂದೆ ನನಗೆ ತುಂಬಾ ಬೇಸರವಾಗಿತ್ತು.
2011ರ ODI ವಿಶ್ವಕಪ್ ಗೆ ಆಯ್ಕೆಯಾಗಿಲ್ಲ. ಆ ಸಮಯದಲ್ಲಿ ನಾನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದೆ. ವಿಷಯ ತಿಳಿದಾಗ ನಾನು ಹತಾಶನಾದೆ.
ನಾನು ಡ್ರೆಸ್ಸಿಂಗ್ ರೂಮ್‌ನಲ್ಲಿ ಒಬ್ಬಂಟಿಯಾಗಿದ್ದೆ ಮತ್ತು ಇದನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ.
ಆದರೆ ಆಗ ನನಗೆ 23 .. 24 ವರ್ಷ. ಮುಂದೆ ಒಳ್ಳೆ ಭವಿಷ್ಯ ಇದೆ. ಇಂತಹ ಪರಿಸ್ಥಿತಿಯಲ್ಲಿ ನಿರಾಸೆಗೊಂಡರೇ ಯಾವುದೇ ಪ್ರಯೋಜನೆ ಇಲ್ಲ ಎಂದು ನನಗೆ ನಾನೇ ಅಂದುಕೊಂಡು 2015ರ ವಿಶ್ವಕಪ್ ಗೆ ರೆಡಿಯಾದೆ ಎಂದಿದ್ದಾರೆ. team-india-captain-rohit-sharma-makes-big-revelation









