ಭಾರತಕ್ಕೆ ಕಾಲಿಟ್ಟ ಹೊಸ ಕೋವಿಡ್ XE ರೂಪಾಂತರ – ಮುಂಬೈನಲ್ಲಿ ಪತ್ತೆ…
ಇಂಗ್ಲೆಂಡ್ನಲ್ಲಿ ಪತ್ತೆಯಾಗಿರುವ ವೇಗವಾಗಿ ಹರಡುವ ಕೊವಿಡ್ ರೂಪಾಂತರಿ ಎಕ್ಸ್ಇ (Covid Variant XE) ಇಡೀ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿತ್ತು. ಇದೀಗ ಆ ಅಪಾಯಕಾರಿ ಕೊವಿಡ್ ರೂಪಾಂತರಿ ವೈರಸ್ ಭಾರತದಲ್ಲೂ ಪತ್ತೆಯಾಗುವ ಮೂಲಕ ದೇಶಾದಲ್ಲೂ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಮೊದಲ ಹೊಸ ಕೋವಿಡ್ ರೂಪಾಂತರಿ ಎಕ್ಸ್ಇ ಪತ್ತೆಯಾಗಿದೆ.
ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್‌ನಲ್ಲಿ 376 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಮಾದರಿಗಳಲ್ಲಿ 11 ನೇ ಬ್ಯಾಚ್ ಪರೀಕ್ಷೆಯಲ್ಲಿ ಒಂದು XE ರೂಪಾಂತರಿ ದೃಢಪಟ್ಟಿದೆ. ಮುಂಬೈನ 230 ಮಾದರಿಗಳಲ್ಲಿ, 228 ಮಾದರಿಗಳು ಓಮಿಕ್ರಾನ್ ರೂಪಾಂತರವಾಗಿದ್ದು, ಒಂದು ಕಪ್ಪಾ ರೂಪಾಂತರ ಮತ್ತು ಇನ್ನೊಂದು XE ರೂಪಾಂತರವಾಗಿದೆ.
ವೈರಸ್‌ನ ಹೊಸ ತಳಿಗಳಿಂದ ಸೋಂಕಿತರಾಗಿರುವ ರೋಗಿಗಳ ಸ್ಥಿತಿ ಗಂಭೀರವಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. Omicron ನ BA.2 ಉಪ-ವೇರಿಯಂಟ್‌ಗಿಂತ XE ರೂಪಾಂತರವು ಶೇಕಡಾ 10 ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು ಅಧಿಕಾರಿ ಹೇಳಿದರು.
ಇಲ್ಲಿಯವರೆಗೆ, ಎಲ್ಲಾ COVID-19 ರೂಪಾಂತರಗಳಲ್ಲಿ BA.2 ಅನ್ನು ಅತ್ಯಂತ ಸಾಂಕ್ರಾಮಿಕ ಎಂದು ಪರಿಗಣಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು, ಇತ್ತೀಚಿನ XE ರೂಪಾಂತರ ಹಿಂದಿನವುಗಳಿಗಿಂತ ಹೆಚ್ಚು ಹರಡಬಹುದು ಎಂದು ಹೇಳಿದೆ.
ಇಂಗ್ಲೆಂಡ್ನಲ್ಲಿ ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರಿ ಪತ್ತೆಯಾಗಿತ್ತು. ಈ ಹೊಸ ರೂಪಾಂತರಿಯು ಒಮಿಕ್ರಾನ್ ತಳಿಯ ಬಿಎ.2 ಉಪ ತಳಿಗಿಂತಲೂ ಶೇ. 10ರಷ್ಟು ಹೆಚ್ಚು ಹರಡುವಿಕೆಯನ್ನು ಹೊಂದಿದೆ.