Kohli-Maxwell | ಮ್ಯಾಕ್ಸಿ ಟೆನ್ಷನ್ ಹೋಗಿಸೋಕೆ ಕೊಹ್ಲಿ ಮಾಡಿದ್ದೇನು..?
ಐಪಿಎಲ್ 2022 ರಲ್ಲಿ ಮಂಗಳವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ RCB ರಣರೋಚಕ ಗೆಲುವು ಸಾಧಿಸಿದೆ. ದಿನೇಶ್ ಕಾರ್ತಿಕ್ ಅವರ ವಿಧ್ವಂಸಕ ಬ್ಯಾಟಿಂಗ್ (23 ಎಸೆತಗಳಲ್ಲಿ 7 ಬೌಂಡರಿ, ಒಂದು ಸಿಕ್ಸರ್) ಮತ್ತು ಶಹಬಾಜ್ ಅಹ್ಮದ್ (26 ಎಸೆತಗಳಲ್ಲಿ 45, 4 ಬೌಂಡರಿ, 3 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಆರ್‌ಸಿಬಿ ಟೂರ್ನಿಯಲ್ಲಿ ಆರ್ ಸಿಬಿ ಎರಡನೇ ಗೆಲುವು ದಾಖಲಿಸಿತು.
ಒಂದು ಹಂತದಲ್ಲಿ 87 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿಯನ್ನು ಕಾರ್ತಿಕ್ ಮತ್ತು ಶಹಬಾಜ್ ಅಹ್ಮದ್ ಗೆಲುವಿನ ದಡ ಸೇರಿಸಿದರು. ಕೊನೆಯಲ್ಲಿ ಶಹಬಾಜ್ ಔಟ್ ಆದ್ರೂ ಕಾರ್ತಿಕ್ ಫಿನಿಶರ್ ಆಗಿ ಪಂದ್ಯವನ್ನು ಮುಗಿಸಿದರು.
ಆದರೆ ಚೇಸಿಂಗ್ ವೇಳೆ ಯಾವುದೇ ತಂಡಕ್ಕೆ ಟೆನ್ಷನ್ ಆಗುವುದು ಸಹಜ. ಅದರಂತೆ ಆರ್‌ಸಿಬಿ ಡ್ರೆಸ್ಸಿಂಗ್ ರೂಮ್‌ನಲ್ಲೂ ಇದು ಸ್ಪಷ್ಟವಾಗಿತ್ತು. ತಂಡದ ಸ್ಕೋರ್ 114/5 ಆಗಿದ್ದಾಗ ಕಾರ್ತಿಕ್ ಬೌಂಡರಿ ಬಾರಿಸಿದರು. ಗಡಿ ರೇಖೆಯನ್ನು ಆವರಿಸಿದ್ದ ಕ್ಯಾಮೆರಾಗಳು ಡ್ರೆಸ್ಸಿಂಗ್ ಕಡೆಗೆ ಜೂಮ್ ಹಾಕಿದ್ದವು. ಅದೇ ಸಮಯಕ್ಕೆ ಸರಿಯಾಗಿ ಮ್ಯಾಕ್ಸ್ ವೆಲ್ ಬಳಿ ಬಂದ ಕೊಹ್ಲಿ, ‘ಪರವಾಗಿಲ್ಲ ಮ್ಯಾಕ್ಸಿ’ ಎಂದು ಹೇಳಿ ಅವರ ಕುತ್ತಿಗೆ ಮತ್ತು ಭುಜಗಳಿಗೆ ಮಸಾಜ್ ಮಾಡಿದರು. ಮ್ಯಾಕ್ಸಿ ಕೂಡ ತನ್ನ ಟೆನ್ಷನ್ ಮುಗಿದಂತೆ ಎಕ್ಸ್‌ಪ್ರೆಶನ್ ಕೊಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. virat-kohli-massage-glenn-maxwell ipl 2022