ಪುರಸಭೆ ಎದುರು ಮೀನು ಎಸೆದು ಮೀನು ಮಾರಾಟಗಾರರ ಪ್ರತಿಭಟನೆ
ಭಟ್ಕಳ: ನಗರದ ಹಳೆ ಬಸ್ ನಿಲ್ದಾಣ ಬಳಿ ಇರುವ ಮೀನು ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿಲ್ಲ ಮತ್ತು ಮೀನು ಮಾರಾಟ ಮಹಿಳೆಯರನ್ನು ಹೊಸ ಮೀನು ಮಾರಾಟ ಮಾರುಕಟ್ಟೆಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಮೀನು ಮಾರಾಟ ಮಹಿಳೆಯರು ಪುರಸಭೆ ಕಾರ್ಯಾಲಯ ಎದುರು ಪ್ರತಿಭಟನೆ ಮಾಡಿದ್ದಾರೆ.
ಕಳೆದ ದು ವಾರದಿಂದ ಮೀನು ಮಾರುಕಟ್ಟಟೆಯನ್ನು ಸ್ವಚ್ಛಗೊಳಿಸಿಲ್ಲ. ನಾವೇ ತ್ವಹಃ ಹಣಕೊಟ್ಟು ಸ್ವಚ್ಛ ಮಾಡಿಸುತ್ತಿದ್ದೇವೆ. ಅಲ್ಲದೇ ಸ್ವಚ್ಛ ಮಾಡಿದ ಸ್ಥಳದಲ್ಲಿ ಮೀನು ಮತ್ತು ಕೋಳಿಯ ತ್ಯಾಜ್ಯಗಳನ್ನು ಬಿಸಾಡಿ ಹೋಗಿದ್ದಾರೆ. ಇದರ ಹಿಂದೆ ಪುರಸಭೆಯ ಕೈವಾಡವಿದೆ ಎಂದು ಆರೋಪಿಸಿ ಪ್ರತಿಭಟಿಸಿದರು.
ಇನ್ನೂ ನಾವು ಈ ಮಾರುಕಟ್ಟೆಯಲ್ಲಿ ಕಳೆದ 40 ವರ್ಷಗಳಿಂದ ಮೀನು ಮಾರುತ್ತಿದ್ದೇವೆ. ಈಗ ನಮ್ಮನ್ನು ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲು ಈ ಹುನ್ನಾರು ಮಾಡಿದ್ದಾರೆ. ಇದರ ಪರ್ಯಾಯವಾಗಿ ಈಗ ಇದ್ದ ಮಾರುಕಟ್ಟೆಯನ್ನು ಸರಿಪಡಿಸಿಕೊಟ್ಟಲ್ಲಿ ಪುರಸಭೆಗೆ ಆದಾಯವಾಗಲಿದೆ. ಆದರೆ ಪುರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳು ಒಂದಲ್ಲೊಂದು ರೀತಿಯಲ್ಲಿ ಮೀನು ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭೆಯು ಮೀನು ವ್ಯಾಪಾರಿಗಳನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಿಸುವ ಉದ್ದೇಶದ ಹಿನ್ನೆಲೆ ಹಳೆಯ ಮೀನು ಮಾರುಕಟ್ಟೆಯನ್ನು ಒಂದು ವಾರದ ಕಾಲ ಸ್ವಚ್ಛಗೊಳಿಸಿಲ್ಲ. ಅಲ್ಲದೇ ನಾವು ಸ್ವಚ್ಛಗೊಳಿಸಿದ ತ್ಯಾಜ್ಯ ಕಸವನ್ನು ಮತ್ತೆ ಮಾರುಕಟ್ಟೆಯೊಳಗೆ ಹಾಕಿದ್ದಾರೆ. ಈ ಮೂಲಕ ಮೀನು ಮಾರುಕಟ್ಟೆಯಿಂದ ತಮ್ಮನ್ನು ಸ್ಥಳಾಂತರಿಸುವ ಸಲುವಾಗಿ ಕಳೆದ ಒಂದು ವಾರದಿಂದ ಸ್ವಚ್ಛತೆ ಮಾಡದೇ ಮೀನು ಮಾರುವ ಮಹಿಳೆಯರು ಅಲ್ಲಿ ಕುಳಿತುಕೊಳ್ಳದಂತೆ ಮಾಡಿದ್ದಾರೆ ಧರಣಿ ಮಾಡಿದರು.








