Daniel Sams | ಡೇನಿಯಲ್ ಸ್ಯಾಮ್ಸ್ ಐಪಿಎಲ್ ನಲ್ಲಿ ಕೆಟ್ಟ ದಾಖಲೆ..
3 ಓವರ್… 50 ರನ್.. ಒಂದು ನೋ ಬಾಲ್.. ಒಂದು ವಿಕೆಟ್.. ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಸ್ಟ್ರೇಲಿಯಾದ ಆಟಗಾರ ಡೇನಿಯಲ್ ಸ್ಯಾಮ್ಸ್ ದಾಖಲಿಸಿದ ಅಂಕಿಅಂಶ.
ಬುಧವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 16.70 ಎಕನಾಮಿಯಲ್ಲಿ ಸ್ಯಾಮ್ಸ್ ರನ್ ಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದರಲ್ಲೂ 16ನೇ ಓವರ್ ನಲ್ಲಿ 35 ರನ್ ಗಳನ್ನು ಸ್ಯಾಮ್ಸ್ ಬಿಟ್ಟುಕೊಟ್ಟಿದ್ದಾರೆ.
ಕೆಕೆಆರ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಸ್ಯಾಮ್ಸ್ ಬೌಲಿಂಗ್ ನಲ್ಲಿ ಪಂದ್ಯವನ್ನೇ ಮುಗಿಸಿಬಿಟ್ಟರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬೌಲರ್ಗಳ ಪಟ್ಟಿಗೆ ಸ್ಯಾಮ್ಸ್ ಸೇರಿದ್ದಾರೆ.
ಈ ಹಿಂದೆ ಪಿ. ಪರಮೇಶ್ವರನ್, ಹರ್ಷಲ್ ಪಟೇಲ್, ರವಿ ಬೋಪಾರ ಮತ್ತು ಪರ್ವಿಂದರ್ ಅವನ್ ಒಂದು ಓವರ್ ನಲ್ಲಿ ಅತಿ ಹೆಚ್ಚು ರನ್ ಗಳನ್ನ ನೀಡಿದ್ದರು.
ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ಗಳು
37- ಪಿ. ಪರಮೇಶ್ವರನ್- 2011- RCB ವಿರುದ್ಧ ಪಂದ್ಯ
37- ಹರ್ಷಲ್ ಪಟೇಲ್-2021- CSK ವಿರುದ್ಧದ ಪಂದ್ಯ
35- ಡೇನಿಯಲ್ ಸ್ಯಾಮ್ಸ್ – 2022 – KKR ವಿರುದ್ಧದ ಪಂದ್ಯ
33- ರವಿ ಬೋಪಾರ-2010- ಕೆಕೆಆರ್ ವಿರುದ್ಧದ ಪಂದ್ಯ
33- ಪರ್ವಿಂದರ್ ಅವನಾ-2014- CSK ವಿರುದ್ಧದ ಪಂದ್ಯ
ipl 2022 daniel-sams-worst-record









