IPL 2022 : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಗ್ಗೆ ಆಕಾಶ್ ಚೋಪ್ರಾ ಪ್ರಿವ್ಯೂ
ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಪಂದ್ಯದ ಬಗ್ಗೆ ಪ್ರಿವ್ಯೂ ನೀಡಿದ್ದಾರೆ.
ಈ ವೇಳೆ ಡೆಲ್ಲಿ ತಂಡದಲ್ಲಿ ಕೆಲ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಡೇವಿಡ್ ವಾರ್ನರ್ ಆಗಮನದಿಂದಾಗಿ ಬ್ಯಾಟಿಂಗ್ ಬಲಿಷ್ಠಗೊಂಡಿದೆ.
ಟೀಮ್ ಸಿಫರ್ಟ್ ಬದಲಿಗೆ ವಾರ್ನರ್ ಸ್ಥಾನ ಪಡೆಯಲಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಮನ್ ದೀಪ್ ಸಿಂಗ್ ಮಾನತಾಡಿದ ಅವರು, ಮನ್ ದೀಪ್ ಸಿಂಗ್ ಐಪಿಎಲ್ ನಲ್ಲಿ ನಿರೀಕ್ಷತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ.
ತಂಡದಲ್ಲಿ ಗಟ್ಟಿಯಾಗಿ ನೆಲೆಯೂರಬೇಕಾದ್ರೆ ಅವರು ತಮ್ಮ ಆಟದ ಶೈಲಿಯನ್ನ ಬದಲಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಐಪಿಎಲ್ ನಲ್ಲಿ ಮನ್ ದೀಪ್ ಸಿಂಗ್ 107ಪಂದ್ಯಗಳನ್ನಾಡಿದ್ದು, 1692 ರನ್ ಗಳನ್ನ ಮಾತ್ರ ಸಿಡಿಸಿದ್ದಾರೆ. ಈ ಋತುವಿನಲ್ಲಿ ಇಂದಿನವರೆಗೆ ಕೇವಲ 18 ರನ್ಗಳು ಮಾತ್ರ ಬಾರಿಸಿದ್ದಾರೆ..
ಹಿಂದೆ ಮನ್‌ದೀಪ್ ಸಿಂಗ್ ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಲ್ಲಿ ಬ್ಯಾಟ್ ಬೀಸಿದ್ದರು.
ಆದ್ರೆ ಯಾವುದೇ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಅವರ ಬದಲಿಗೆ ಕೆ.ಎಸ್. ಭರತ್ ಅಥವಾ ಯಶ್ ಧೂಳ್ ಗೆ ಅವಕಾಶ ನೀಡಬೇಕು ಎಂದಿದ್ದಾರೆ.
ipl-2022-aakash-chopra-comments-dc-batter-mandeep-singh









