ಚಿಕ್ಕೊಡಿಯಲ್ಲಿ 10 ರೂ ಮೌಲ್ಯದ ಪಾಕಿಸ್ತಾನದ ಕರೇನ್ಸಿ ಪತ್ತೆ
ಚಿಕ್ಕೋಡಿ: ಪಾಕಿಸ್ತಾನದ 10 ರೂ ಮುಖಬೆಲಯ ನೋಟ ಒಂದು ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪತ್ತೆಯಾಗಿದೆ.
ಇನ್ನೂ ಈ ಗ್ರಾಮದಲ್ಲಿ ಸುಮಾರು 12-14 ಸಾವಿರ ಜನಸಂಖ್ಯೆ ಇದ್ದು, ಈ ಗ್ರಾಮದಲ್ಲಿ ಎಲ್ಲ ಜಾತಿಯ ಜನಾಂಗದವರು ವಾಸಿಸುತ್ತಿದ್ದಾರೆ. ಈಗ ಅಲ್ಲಿ ಪಾಕಿಸ್ತಾನ ಕರೇನ್ಸಿ ಸಿಕ್ಕಿದ್ದು, ಇಲ್ಲಿಗೆ ಹೇಗೆ ಬಂತು ಎಂದು ಚಿಕ್ಕೋಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಕೆ ನಡೆಸುತ್ತಿದ್ದಾರೆ.
ಪಾಕಿಸ್ತಾನದ 10 ರೂ ಮೌಲ್ಯದ ನೋಟು ಕರೋಶಿ ಗ್ರಾಮದ ಬಸ್ ನಿಲ್ದಾಣದ ರಸ್ತೆಯಲ್ಲಿ ಯುವಕನೋರ್ವನಿಗೆ ಬಿದ್ದು ಸಿಕ್ಕಿದೆ. ಅದರಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವಿರುವ ಈ ನೋಟು ಎಸಿಜೆ 1389126 ನಂಬರನ್ನು ಹೊಂದಿದ್ದು, ನೋಟಿನ ಮೇಲೆ ಆಂಗ್ಲ ಭಾಷೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹಾಗೂ ಉರ್ದು ಭಾಷೆಯ ಬರಹಗಳನ್ನು ಹೊಂದಿದೆ.
ಸಧ್ಯ ನೋಟನ್ನು ಚಿಕ್ಕೋಡಿ ಪೊಲೀಸರು ವಶಪಡಿಸಿಕೊಂಡಿದ್ದು, ಚಿಕ್ಕೋಡಿ ಪೊಲೀಸರು ಮತ್ತು ಗುಪ್ತಚರ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ.








