Tejaswi surya | ಪ್ರಧಾನಿ ದೇಶವನ್ನ ಬಡತನ ಮುಕ್ತ ಮಾಡ್ತಿದ್ದಾರೆ
ಬೆಂಗಳೂರು : ಅಲ್ಪಸಂಖ್ಯಾತರಿಗೆ ಮತ್ತು ಬಡವರನ್ನ ಕಾಂಗ್ರೆಸ್ ನವರು ಕಡಗಣನೆ ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ರವರ ಆಡಳಿತದಲ್ಲಿ ಆವಾಸ್ ಯೋಜನೆ, ಮುದ್ರ ಯೋಜನೆ ಬಡವರ ಪರವಾಗಿ ಯೋಜನೆಗಳ ಕೊಟ್ಟು ಬಡತನವನ್ನು ಮುಕ್ತ ಮಾಡುತ್ತಿದ್ದಾರೆ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಚಿಕ್ಕಪೇಟೆಯ ಪಾರ್ವತಿಪುರಂನಲ್ಲಿ ವಿವಿಧ ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕು ಪತ್ರ ವಿತರಣಾ ಮತ್ತು ಪಾರ್ವತಿಪುರಂನಲ್ಲಿ ನಿರ್ಮಿಸಿರುವ ಬಹುಮಹಡಿ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರಮೋದಿರವರು ಸೂರು ಇಲ್ಲದ ದೇಶದ 80ಲಕ್ಷ ಕುಟುಂಬದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅನುದಾನ ಅಡಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ.
ವಸತಿ ಯೋಜನೆಯಲ್ಲಿ ಫಲಾನುಭವಿಗಳನ್ನು ಮಹಿಳೆಯರನ್ನ ಗುರುತಿಸಿ, ವಸತಿಗಳನ್ನು ನೋಂದಣೆ ಮಾಡಿಕೊಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರವರ ಆಡಳಿತದಲ್ಲಿ ಆವಾಸ್ ಯೋಜನೆ, ಮುದ್ರ ಯೋಜನೆ ಬಡವರ ಪರವಾಗಿ ಯೋಜನೆಗಳ ಕೊಟ್ಟು ಬಡತನವನ್ನು ಮುಕ್ತ ಮಾಡುತ್ತಿದ್ದಾರೆ ಎಂದರು.
ಶಾಸಕರಾದ ಉದಯ್ ಬಿ.ಗರುಡಾಚಾರ್ ಮಾತನಾಡಿ, ಭಾರತ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ.ವಿಶ್ವದ ಬಲಿಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿರವರ ಪ್ರತಿಯೊಬ್ಬ ಕುಟುಂಬಕ್ಕೆ ಬಡವರಿಗೆ ಸೂರು, ಉದ್ಯೋಗ ಮತ್ತು ಆಹಾರ ಭದ್ರತೆ,ವೈದ್ಯಕೀಯ ಸೌಲಭ್ಯ ಸಿಗಬೇಕು ಎಂಬ ಮಹಾತ್ವಕಾಂಕ್ಷೆಯಾಗಿತ್ತು.
ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು,ವಸತಿ ಸಚಿವರಾದ ವಿ.ಸೋಮಣ್ಣರವರ ಸಹಕಾರದಿಂದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 32ಕೊಳಚೆ ಪ್ರದೇಶವಿದೆ ಇದೀಗ ಪಾರ್ವತಿಪುರಂ 45ಕುಟುಂಬಗಳಿಗೆ ಬಹುಮಹಡಿ ಕಟ್ಟಡ ವಸತಿ ಕಟ್ಟಡ ಕಟ್ಟಿಕೊಡಲಾಗಿದೆ ಮತ್ತು 2000ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಪ್ರತಿ ಮನೆಗಳಿಗೆ ಸ್ವಯಂ ಸೇವಕರ ತಂಡದ ಜೊತೆಯಲ್ಲಿ ಭೇಟಿ ನೀಡಿ,ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಯ ಲಾಭ ತಲುಪುವಂತೆ ಮಾಡಲಾಗಿದೆ.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು,ಧ್ವನಿ ಇಲ್ಲದವರು ಸಮಾಜದ ಮುಖ್ಯವಾಹಿನಿಗೆ ತರಬೇಕು ಸಮ ಸಮಾಜದ ನಿರ್ಮಾಣ ನಮ್ಮ ಗುರಿ ಎಂದು ಹೇಳಿದರು.