ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

KarnatakaCM | ಮುಖ್ಯಮಂತ್ರಿಗಳೇ…. ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ

Mahesh M Dhandu by Mahesh M Dhandu
April 11, 2022
in Newsbeat, Politics, ಬೆಂಗಳೂರು
CM Bommai Saaksha Tv
Share on FacebookShare on TwitterShare on WhatsappShare on Telegram

KarnatakaCM | ಮುಖ್ಯಮಂತ್ರಿಗಳೇ…. ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ

ಬೆಂಗಳೂರು : ಧಾರವಾಡ ನುಗ್ಗೀಕೇರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಮುಸ್ಲಿಂರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶ್ರೀ ರಾಮಸೇನೆ ಕಾರ್ಯಕರ್ತರು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಘಟಕ ಟ್ವಿಟ್ಟರ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧದ ಕಿಡಿಕಾರಿದೆ.

Related posts

world-elephant-day-vantara-conservation-initiative

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ

August 12, 2026
crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

August 12, 2026

ಮುಖ್ಯಮಂತ್ರಿಗಳೇ…. ಸೌಖ್ಯವೇ? ಆರೋಗ್ಯವಾಗಿದ್ದೀರಿ ಅಲ್ಲವೇ? ಕಣ್ಣು, ಕಿವಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ ತಾನೇ? ಮೆದುಳು ಸುಸ್ಥಿತಿಯಲ್ಲಿದೆ ತಾನೇ? ಹೃದಯವಿದೆಯಲ್ಲವೇ?ಎಲ್ಲವೂ ಸರಿ ಇದ್ದು ಸುಮ್ಮನಿದ್ದೀರಿ ಎಂದರೆ ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ ಎಂದು ಖಾರವಾಗಿ ಟ್ವೀಟ್ ಮಾಡಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

karnataka congress slams Basavaraja bommai   saaksha tv

ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಬಂಧಿತರು. ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಲಾಗಿತ್ತು.

ನಡೆದಿದ್ದೇನು : ಧಾರವಾಡ ಹೊರವಲಯದ ನುಗ್ಗಿಕೇರಿ ಆಂಜನೇಯ ಸ್ವಾಮಿ ದೇವಸ್ಥಾನ ಪ್ರಸಿದ್ಧಿ ಪಡೆದ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಪ್ರತಿ ಶನಿವಾರ ಸಾವಿರಾರು ಭಕ್ತು ಬಂದು ದೇವರ ದರ್ಶನ ಪಡೆಯುತ್ತಾರೆ. ಈ ದೇವಸ್ಥಾನದ ಆವರಣದಲ್ಲಿ 4 ಹಿಂದೂಯೇತರ ಅಂಗಡಿಗಳಿದ್ದು,   ಕಳೆದ 15 ದಿನಗಳ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರು ದೇವಸ್ಥಾನದ ಬಳಿ ಬಂದು ಪ್ರತಿಭಟನೆ ಮಾಡಿದ್ದರು.

ಹಾಗೇ ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂದು ಮನವಿ ಮಾಡಿದ್ದರು. ಶನಿವಾರ ಹಿಂದೂಯೇತರ ಅಂಗಡಿಗಳು ಮುಚ್ಚದೇ ಇದ್ದಿದ್ದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸ್ಥಳಕ್ಕೆ ಬಂದು ಅಂಗಡಿಗಳಲ್ಲಿದ್ದ ಕಲ್ಲಂಗಡಿ ಹಣ್ಣು ಹಾಗೂ ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದರು.

Tags: #Saaksha TVBasavaraja BommaiBJPkarnataka
ShareTweetSendShare
Join us on:

Related Posts

world-elephant-day-vantara-conservation-initiative

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ

by admin
August 12, 2026
0

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ   ಜಾಮ್‌ನಗರ, ಆಗಸ್ಟ್ 12: ವಿಶ್ವ ಆನೆ ದಿನದ ಸಂದರ್ಭದಲ್ಲಿ ಅನಂತ್ ಅಂಬಾನಿ ಆರಂಭಿಸಿದ ವಂತಾರಾ ಸಂಸ್ಥೆಯು ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಹಂಚಿಕೊಂಡಿದೆ. ಆನೆಗಳ ಆರೈಕೆ, ಮಾವುತರಿಗೆ ತರಬೇತಿ, ಸಂರಕ್ಷಣೆಗೆ ಸಂಬಂಧಿಸಿದ ಜ್ಞಾನ ವಿನಿಮಯ ಹಾಗೂ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ವಂತಾರಾ ಭಾರತದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಾರ್ಯ ನಿರ್ವಹಿಸುತ್ತಿದೆ.  ವಂತಾರಾದಲ್ಲಿ ಸದ್ಯಕ್ಕೆ 260ಕ್ಕೂ ಹೆಚ್ಚು ಏಷ್ಯನ್ ಆನೆಗಳನ್ನು ಆರೈಕೆ ಮಾಡಲಾಗುತ್ತಿದೆ. ಇದು 'ಗೌರಿ'ಯಿಂದ ಆರಂಭವಾಗಿತ್ತು, ಇದನ್ನು ಅನಂತ್ ಅಂಬಾನಿ ಮೊದಲು ರಕ್ಷಿಸಿದ್ದರು. ಇದರ ನಂತರ ಆನೆಗಳಿಗೆ ವಿಶೇಷ ಆರೈಕೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಹೆಜ್ಜೆಯು ನಿರಂತರವಾಗಿ ಮುಂದುವರಿದಿದೆ.  ಅನಂತ್ ಅಂಬಾನಿ ಅವರು ಮಾತನಾಡಿ, "ಆನೆಗಳು ನನ್ನ ಹೃದಯದಲ್ಲಿ ಮತ್ತು ವಂತಾರಾದ ಪಯಣದಲ್ಲಿ ಸದಾ ವಿಶೇಷ ಸ್ಥಾನವನ್ನು ಹೊಂದಿವೆ. ಪ್ರತಿ ಆನೆಗೂ ತನ್ನದೇ ಆದ ಕಥೆಯಿದೆ ಮತ್ತು ಪ್ರತಿ ರಕ್ಷಣೆಯು ಅವುಗಳ ಆರೈಕೆಯ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ. ಗೌರಿಯ ರಕ್ಷಣೆಯಿಂದ ಆರಂಭವಾದ ಈ ಪಯಣ ಈಗ ಆನೆಗಳ ಕಲ್ಯಾಣ, ಅವುಗಳನ್ನು ಆರೈಕೆ ಮಾಡುವವರಿಗೆ ಬೆಂಬಲ, ಜ್ಞಾನ ಹಂಚಿಕೆ ಮತ್ತು ಭಾರತ ಹಾಗೂ ವಿಶ್ವದಾದ್ಯಂತ ಸಂರಕ್ಷಣಾ ಪ್ರಯತ್ನಗಳವರೆಗೆ ತಲುಪಿದೆ. ವಿಶ್ವ ಆನೆ ದಿನದಂದು ಈ ಅದ್ಭುತ ಜೀವಿಗಳನ್ನು ಗೌರವಿಸುತ್ತಾ ಅವುಗಳ ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಹೇಳುತ್ತೇವೆ," ಎಂದರು.   ಜೈಪುರದ ಆನೆ ಗ್ರಾಮದಲ್ಲಿ ವಿಶೇಷ ಸೌಲಭ್ಯಗಳು  ರಾಜಸ್ಥಾನ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಸಂಜಯ್ ಶರ್ಮಾ ಅವರು ವಿಶ್ವ ಆನೆ ದಿನದ ಸಂದರ್ಭದಲ್ಲಿ ಜೈಪುರ್ ಆನೆ ಗ್ರಾಮದಲ್ಲಿ ಆನೆಗಳ ಆರೈಕೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ವಂತಾರಾದೊಂದಿಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಇದರಡಿಯಲ್ಲಿ ಆಧುನಿಕ ಆನೆ ಚಿಕಿತ್ಸಾ ಮತ್ತು ಆರೈಕೆ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಆಸ್ಪತ್ರೆ, ಪೋಷಕಾಂಶ ಕೇಂದ್ರ ಮತ್ತು ಜಲಚಿಕಿತ್ಸಾ (ಹೈಡ್ರೋಥೆರಪಿ) ಸೌಲಭ್ಯಗಳು ಸೇರಿವೆ. ವಯಸ್ಸಿನಲ್ಲಿ ಹಿರಿಯ ಆನೆಗಳಿಗಾಗಿ ಪ್ರತ್ಯೇಕ ನಿವೃತ್ತಿ ಮತ್ತು ಆರೈಕೆ ಕೇಂದ್ರವನ್ನೂ ನಿರ್ಮಿಸಲಾಗುವುದು.  ದೇಶದ ನಾಲ್ಕು ರಾಜ್ಯಗಳಲ್ಲಿ ಆನೆ ಕಲ್ಯಾಣ ಕಾರ್ಯಕ್ರಮ  ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪ ಸಮೂಹಗಳಲ್ಲಿ ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಕೈಜೋಡಿಸಿ ವಂತಾರಾ ಆನೆ ಕಲ್ಯಾಣ ಔಟ್‌ರೀಚ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದೆ. ಇದರ ಅಡಿಯಲ್ಲಿ 182 ಆನೆಗಳು ಮತ್ತು 242 ಮಾವುತರನ್ನು ಒಳಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಆನೆಗಳ ಆರೋಗ್ಯ, ಮಾನವೀಯ ರೀತಿಯಲ್ಲಿ ಆರೈಕೆ, ಪ್ರಥಮ ಚಿಕಿತ್ಸೆ ಮತ್ತು ಅತ್ಯುತ್ತಮ ನಿರ್ವಹಣೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗಿದೆ. ಪಶುವೈದ್ಯಕೀಯ ಹಾಗೂ ಕಲ್ಯಾಣ ಕಿಟ್‌ಗಳೊಂದಿಗೆ ಪೌಷ್ಟಿಕಾಂಶದ ಬೆಂಬಲವನ್ನೂ ಒದಗಿಸಲಾಗಿದೆ.   ಮಕ್ಕಳಲ್ಲಿ ಆನೆಗಳ ಬಗ್ಗೆ ಸಂವೇದನೆಯನ್ನು ಹೆಚ್ಚಿಸಲು ವಂತಾರಾ 'ಮೈ ಫ್ರೆಂಡ್ ಲೀಲಾವತಿ' ಸಾಮಾಜಿಕ ಜಾಲತಾಣ ಅಭಿಯಾನವನ್ನೂ ಆರಂಭಿಸಿದೆ. ಇದರ ಮೂಲಕ 'ಲೀಲಾವತಿ' ಹೆಸರಿನ ಹೆಣ್ಣಾನೆಯ ಕಥೆಯ ಮೂಲಕ ಮಕ್ಕಳಿಗೆ ದಯೆ, ಕರುಣೆ ಮತ್ತು ಪ್ರಾಣಿಗಳ ಗೌರವದ ಸಂದೇಶವನ್ನು ಸಾರಲಾಗುತ್ತಿದೆ.   ಮಾನವ-ಆನೆ ಸಂಘರ್ಷ, ಜಾಗತಿಕ ಸಹಕಾರ  ಮಾನವ ಆನೆ ಸಂಘರ್ಷವನ್ನು ಕಡಿಮೆ ಮಾಡಲು ವಂತಾರಾ ಎಲಿಫೆಂಟ್ ಪ್ರೊಟೆಕ್ಷನ್ ಇನಿಷಿಯೇಟಿವ್ (EPI) ಫೌಂಡೇಷನ್‌ಗೂ ಅನುದಾನ ನೀಡುತ್ತಿದೆ. ಇದರ ಮೂಲಕ ಏಷ್ಯಾ ಮತ್ತು ಆಫ್ರಿಕಾದ ಆನೆಗಳಿರುವ ದೇಶಗಳ ತಜ್ಞರು, ಸಂರಕ್ಷಣೆ ಮಾಡುವವರು ಮತ್ತು ಯುವಕರನ್ನು 2027ರ ಮಾರ್ಚ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯುವ ಜಾಗತಿಕ ಸಮ್ಮೇಳನಗಳಲ್ಲಿ ಭಾಗವಹಿಸಲು ಬೆಂಬಲ ನೀಡಲಾಗುತ್ತದೆ. ಇದರೊಂದಿಗೆ ಇಪಿಐ ಯೂಥ್ ಅಂಬಾಸಿಡರ್ಸ್ ಪ್ರೋಗ್ರಾಂ ಅನ್ನು ಮೊದಲ ಬಾರಿಗೆ ಭಾರತಕ್ಕೂ ವಿಸ್ತರಿಸಲು ಸಹಾಯ ಮಾಡಲಾಗುವುದು.   ವಂತಾರಾದ ಪ್ರಕಾರ, ತಳಮಟ್ಟದಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳನ್ನು ಎದುರಿಸಲು ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಪಶುವೈದ್ಯಕೀಯ ತಂಡಗಳು, ಥರ್ಮಲ್ ಡ್ರೋನ್ ಕಣ್ಗಾವಲು ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಾಯಗೊಂಡ ಆನೆಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಮಾನವರು ಮತ್ತು ಆನೆಗಳ ನಡುವೆ ದೀರ್ಘಕಾಲದ ಉತ್ತಮ ಸಹ-ಅಸ್ತಿತ್ವವನ್ನು ಉತ್ತೇಜಿಸುವುದು ಈ ಪ್ರಯತ್ನಗಳ ಮುಖ್ಯ ಉದ್ದೇಶವಾಗಿದೆ.  

crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

by admin
August 12, 2026
0

'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್ಸ್' ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ...

second-case-of-seetharam-amazon-prime-streaming-record-250-million-minutes

ಅಮೆಜಾನ್ ಪ್ರೈಮ್‌ನಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಐತಿಹಾಸಿಕ ಸಾಧನೆ: 25 ಕೋಟಿಗೂ ಅಧಿಕ ಸ್ಟ್ರೀಮಿಂಗ್ ನಿಮಿಷಗಳ ದಾಖಲೆ!

by admin
August 12, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ದ ಕಂಟೆಂಟ್ ಆಧಾರಿತ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕನ್ನಡದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' (Second Case of Seetharam)...

varamahalakshmi-vrata-mantra-for-wealth-and-prosperity

ವರಮಹಾಲಕ್ಷ್ಮಿ ವ್ರತ ದಿನದಂದು ಒಂದು ಮನಇಚ್ಚಾ ಪದ 8 ಬಾರಿ ಹೇಳಿದರೆ ಅಷ್ಟ ಐಶ್ವರ್ಯ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

by admin
August 12, 2026
0

ಮನೆಗೆ ಅಷ್ಟ ಐಶ್ವರ್ಯ ತರುವ ಮಂತ್ರ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

depuy-synthes-ralc-bangalore-orthopedic-training-center

ಮೂಳೆ ಶಸ್ತ್ರಚಿಕಿತ್ಸಾ ವಲಯದಲ್ಲಿ ಹೊಸ ಮೈಲಿಗಲ್ಲು, ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ತರಬೇತಿ ಕೇಂದ್ರ

by admin
August 12, 2026
0

ಬೆಂಗಳೂರು: ಮೂಳೆ ಚಿಕಿತ್ಸಾ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜೊತೆ ಮಹತ್ವದ ಒಪ್ಪಂದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram