ಮುಂಬೈ : ಕಳೆದ 2 ವಾರಗಳಿಂದ ಬಹುಭಾಷಾ ನಟ ಸೋನುಸೂದ್ ಅವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸದ್ಯ ಕೊರೊನಾ ಲಾಕ್ ಡೌನ್ ನಿಂದಾಗಿ ತೊಂದರೆಗಳಿಗೆ ಸಿಲುಕಿರುವವರಿಗೆ ಊಟ ಮತ್ತು ಅವಶ್ಯಕ ವಸ್ತುಗಳನ್ನು ನೀಡುವುದರ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ ಸೋನುಸೂದ್. ಹೀಗಾಗಿ ಟ್ವಿಟ್ಟರ್ ನಲ್ಲಿ ಅನೇಕರು ಸೋನುಸೂದ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡುತ್ತಿದ್ದಾರೆ. ಇದರ ಮಧ್ಯೆ ಕೆಲ ಅಭಿಮಾನಿಗಳು ಸೂದ್ ಎದುರು ವಿಚಿತ್ರ ಬೇಡಿಕೆಗಳನ್ನು ಇಟ್ಟಿದ್ದು, ಇದಕ್ಕೆ ವಿಭಿನ್ನ ರೀತಿಯ ಪ್ರತ್ಯುತ್ತರ ನೀಡುತ್ತಿದ್ದಾರೆ ಪಶುಪತಿ.
ಮೊನ್ನೆಯಷ್ಟೆ ಒಬ್ಬ ತನಗೆ ಸಾರಾಯಿ ಅಂಗಡಿಗೆ ಹೋಗಲು ಸಹಾಯ ಮಾಡಲು ಟ್ವಿಟ್ಟರ್ ನಲ್ಲಿ ಸೋನು ಸೂದ್ ಬಳಿ ಕೇಳಿಕೊಂಡಿದ್ದ. ಇದಕ್ಕೆ ಕೋಪಗೊಳ್ಳದೆ, ಸೋನು “ನಾನು ನಿನ್ನನ್ನು ಸಾರಾಯಿ ಅಂಗಡಿಗೆ ಹೋಗಲು ಸಹಾಯ ಮಾಡಲಾರೆ, ಆದರೆ ಸಾರಾಯಿ ಅಂಗಡಿಯಿಂದ ಮನೆಗೆ ತಲುಪಲು ಬೇಕಾದರೆ ಸಹಾಯ ಮಾಡುವೆ” ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಇದೇ ರೀತಿ ಬಿಹಾರದ ಯುವಕನೊಬ್ಬ ತನ್ನ ಗೆಳತಿಯನ್ನು ನೋಡಲು ಬಿಹಾರಕ್ಕೆ ಹೋಗಲು ಸಹಾಯ ಮಾಡಿ ಎಂದು ಸೋನು ಬಳಿ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ.
ಇನ್ನು ಯುವಕ ಟ್ವೀಟ್ ಗೆ ಸೋನುಸೂದ್ ಪ್ರತಿಕ್ರಿಯೆ ನೀಡಿದ್ದು, “ಸ್ವಲ್ಪ ದಿನ ದೂರವಿದ್ದು ನೋಡು, ನಿಜವಾದ ಪ್ರೀತಿಯ ಪರೀಕ್ಷೆ ಆಗಲಿ” ಎಂದು ಯುವನಿಗೆ ಸಲಹೆ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಈ ಟ್ವೀಟ್ 40 ಸಾವಿರ ಲೈಕ್ ಮತ್ತು 4000 ರಿಟ್ವೀಟ್ ಗಳನ್ನು ಪಡೆದಿದೆ.
थोड़े दिन दूर रह के देख ले भाई .. सच्चे प्यार की परीक्षा भी हो जाएगी । 😂 https://t.co/mD7JEMgD3q
— sonu sood (@SonuSood) May 25, 2020








