ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ರಾಯಚೂರು: ಶಾಲೆಯೊಂದರ ಹಿಂಭಾಗದ ಮರೊವೊಂದಕ್ಕೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.
ಮಹಾಂತೇಶ (40) ಮೃತ ದುರ್ದೈವಿ. ಇವರು ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದವರಾಗಿದ್ದು, ಇವರು ಕೌಟುಂಬಿಕ ಕಲಹದಿಂದ ಬೇಸತ್ತು ಮಸ್ಕಿಯ ಸರಕಾರಿ ಪಬ್ಲಿಕ್ ಶಾಲೆಯ ಹಿಂಭಾಗದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಡೆದದ್ದೇನು? : ಕೌಟುಂಬಿಕ ಕಲಹದಿಂದ ಬೇಸತ್ತಿತ್ತದ ಮಹಾಂತೇಶ, ರಾತ್ರಿ ಮನೆಯಲ್ಲಿ ಜಗಳವಾಡಿಕೊಂಡು ಬೈಕನ್ ನಲ್ಲಿ ಹೊರ ಬಂದಿದ್ದರು. ಹಾಗೇ ಹೊರ ಬಂದ ಮಹಾಂತೇಶ ಮಸ್ಕಿಯ ಲಿಂಗಸೂರು ರಸ್ತೆಯಲ್ಲಿರುವ ಸರಕಾರಿ ಪಬ್ಲಿಕ್ ಶಾಲೆಯ ಹಿಂಭಾಗದಲ್ಲಿ ಬೈಕ್ ನಿಲ್ಲಿದ್ದಾರೆ.
ನಂತರ ಶಾಲೆಯ ಹಿಂಭಾಗದಲ್ಲೇ ಇರುವ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








