ರಾಜ್ಯಕ್ಕೆ ಸ್ಟ್ರಾಂಗ್ ಗೃಹ ಸಚಿವರು ಬೇಕು : ಯತ್ನಾಳ್
ವಿಜಯಪುರ: ರಾಜ್ಯಕ್ಕೆ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡಲಿ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸ್ವ ಪಕ್ಷದವರ ವಿರುದ್ಧ ಕಿಡಿ ಕಾರಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲೂ ಗಲಾಟೆ ಆಗುತ್ತಿಲ್ಲ. ರಾಜ್ಯದಲ್ಲಿ ಮಾತ್ರ ಗಲಾಟೆ ಆಗುತ್ತಿವೆ. ಇದರಿಂದ ಮುಗ್ದ ಹಿಂದುಗಳು ಸಾಯುತ್ತಿದ್ದಾರೆ. ಹೀಗಾಗಿ ಗೃಹ ಸಚಿವರು ಪರಿಶೀಲನೆ ಕೈ ಬಿಡಬೇಕು. ಇನ್ನೇಲೆ ಓನ್ಲಿ ಆಕ್ಯ್ಷನ್ ಆಗಬೇಕು ಅಷ್ಟೇ. ಬರಿ ಕಥೆ ಹೇಳು ಕೆಲಸ ಆಗಬಾರದು ಎಂದು ಯತ್ನಾಳ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮನೆ ಮನೆಯ ಸರ್ಚ್ ಆಪರೇಷನ್ ಆಗಬೇಕು. ಗಲಭೆಯಲ್ಲಿ ಕೆಲವೊಂದು ಶಕ್ತಿಗಳು ಕೆಲಸ ಮಾಡುತ್ತಿವೆ. ಮೆರವಣಿಗೆ ಹೋಗುವ ಮೊದಲು ಮನೆ, ಅಂಗಡಿ ಮೇಲೆ ಸರ್ಚ್ ಮಾಡಬೇಕು. ಯಾರ ಮನೆಯಲ್ಲಿ ತಲ್ವಾರ್, ಜಂಬೆ ಇವೆ ಎಂಬುವದರ ಕುರಿತು ಸರ್ಚ್ ಮಾಡಬೇಕು ಎಂದು ಹೇಳಿದರು.
ಅಲ್ಲದೇ ಬಿಜೆಪಿ ಅಧಿಕಾರ ಇದೆ, ನೀವೇನು ಮಾಡುತ್ತೀರಾ ಎಂದು ಜನತೆ ಕೇಳುತ್ತಾರೆ. ಕಾಂಗ್ರೆಸ್ ನವರು ಮಾಡಿದ್ದರೆ. ಜೈಲ್ ಒಳಗೆ ಹಾಕಿ. ಡಿಜೆ ಹಳ್ಳಿಯಲ್ಲಿ ಕೇಸ್ ನಲ್ಲಿ ಶಾಸಕ ಜಮೀರ್ ಅಹ್ಮದ್ ಮೇಲೆ ಆಕ್ಷನ್ ಆಗಬೇಕಿತ್ತು. ಒಳಗೆ ಎಲ್ಲವೂ ಹೊಂದಣಿಕೆ ಇದೆ. ಕರ್ನಾಟಕದ ಹಿತದೃಷ್ಟಿಯಿಂದ ಆಕ್ಷನ್ ಆಗಬೇಕು ಎಂದು ಒತ್ತಾಯಿಸಿದರು.