ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ, ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ. ಲಾಕ್ ಡೌನ್ ನಿಂದಾಗಿ ಸುಮಾರು ತಿಂಗಳುಗಳ ಕಾಲ ಮನೆಯಲ್ಲಿಯೆ ಇದ್ದ ಅಪ್ಪು ಸದ್ಯ ಚಿತ್ರದ ಕೆಲಸಕ್ಕೆ ಮತ್ತೆ ಮರಳಿದ್ದಾರೆ. ಸದ್ಯ ಯುವರತ್ನ ಚಿತ್ರದ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ. ಇದರ ನಡುವೆ ಪವರ್ ಸ್ಟಾರ್ ಅಭಿಮಾನಿಗಳಿಗೆ ಚಿತ್ರತಂಡ ಸೂಪರ್ ಗಿಫ್ಟ್ ನೀಡಿದ್ದು, ಚಿತ್ರದ ಫೋಟೋವೊಂದನ್ನು ಹಂಚಿಕೊಂಡಿದೆ. ಪವರ್ ಸ್ಟಾರ್ ಪವರ್ ಫುಲ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
‘ಪವರ್ ಆಫ್ ಯೂತ್’ ಹಾಡಿನ ಡ್ಯಾನ್ಸ್ ಸ್ಟಿಲ್
ಯುವರತ್ನ ಚಿತ್ರತಂಡ ರಿಲೀಸ್ ಮಾಡಿರುವ ಫೋಟೋಗೆ ಸೋಷಿಯಲ್ ಮೀಡಿಯಾದಲ್ಲಿ ಬೊಂಬಾಟ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಪ್ಪು ಅಭಿಮಾನಿಗಳು ಫೋಟೋವನ್ನು ಶೇರ್ ಮಾಡುತ್ತಾ.. ಫೋಟೊಗೆ ಕಾಮೆಂಟ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ.
ಅಂದ್ಹಾಗೆ ಸದ್ಯ ರಿಲೀಸ್ ಆಗಿರುವ ಫೋಟೊ, ಯುವರತ್ನ ಚಿತ್ರದ ಹಾಡಿನದ್ದಾಗಿದೆ. ಈ ಫೋಟೋದಲ್ಲಿ ಪವರ್ ಸ್ಟಾರ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ‘ಪವರ್ ಆಫ್ ಯೂತ್’ ಹಾಡಿನ ಡ್ಯಾನ್ಸ್ ಸ್ಟಿಲ್ ಇದಾಗಿದೆ. ಭರ್ಜರಿ ಸ್ಟೆಪ್ ಹಾಕುತ್ತಿರುವ ಪುನೀತ್ ರಾಜ್ ಕುಮಾರ್ ಈ ಫೋಟೋ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
A Still from #PowerofYouth Song !#YuvaRathnaa #KingofEntertainment #PowerStar @PuneethRajkumar @hombalefilms @VKiragandur @MusicThaman @Karthik1423 pic.twitter.com/MjHt9JZnUB
— Santhosh Ananddram (@SanthoshAnand15) May 27, 2020
ಯುವರತ್ನ ಸಿನಿಮಾಗೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ತಮನ್ ಸಂಗೀತ ನೀಡಿದ್ದಾರೆ. ಈ ಹಿಂದೆ ಕೂಡ ಪುನೀತ್ ರ ಚಕ್ರವ್ಯೂಹ ಚಿತ್ರಕ್ಕೆ ತಮನ್ ಸಂಗೀತ ನೀಡಿದ್ದರು. ಪುನೀತ್ ರಾಜ್ ಕುಮಾರ್ ಪವರ್ ಫುಲ್ ಫೋಟೋಗೆ ತಮನ್ ಪ್ರತಿಕ್ರಿಯೆ ನೀಡಿದ್ದು, ‘ಇದು ಎನರ್ಜಿ’ ಎಂದಿದ್ದಾರೆ.








