IPL 2022 | ಆ ಸಾಧನೆ ಮಾಡಿದ 3ನೇ ಆಟಗಾರ ಪಡಿಕ್ಕಲ್
ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ದೇವದತ್ತ ಪಡಿಕ್ಕಲ್ ಐಪಿಎಲ್‌ನಲ್ಲಿ 1,000 ರನ್ ಗಡಿ ದಾಟಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಡಿಕ್ಕಲ್ 2 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದರು.
ಇದರೊಂದಿಗೆ ಪಡಿಕ್ಕಲ್ ಐಪಿಎಲ್‌ನಲ್ಲಿ ಅತಿ ವೇಗವಾಗಿ ಸಾವಿರ ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡರು.
35 ಪಂದ್ಯಗಳಲ್ಲಿ ದೇವದತ್ತ್ ಈ ಸಾಧನೆ ಮಾಡಿದ್ದಾರೆ. ಅವರ 1000 ರನ್ ಗಳಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳಿವೆ.
ಆದರೆ, ಈ ಋತುವಿನಲ್ಲಿ ಪಡಿಕ್ಕಲ್ ಬ್ಯಾಟ್ ಸದ್ದು ಮಾಡುತ್ತಿಲ್ಲ.
ಕಳೆದ ಋತುವಿನಲ್ಲಿ ಆರ್‌ಸಿಬಿ ಪರ ಉತ್ತಮ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ಈ ಬಾರಿ ರಾಜಸ್ಥಾನ ಪರ ಸತತ ಐದು ಪಂದ್ಯಗಳಲ್ಲಿ 41,7,37,29,0 ರನ್ ಗಳಿಸಿದ್ದಾರೆ.
ಕೆಕೆಆರ್ ವಿರುದ್ಧದ ಇತ್ತೀಚಿನ ಪಂದ್ಯ 18 ಎಸೆತಗಳಲ್ಲಿ 24 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ 1,000 ರನ್ ಗಳಿಸಿದ ಪಡಿಕ್ಕಲ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
“ದಾಖಲೆಗಳ ವಿಷಯದಲ್ಲಿ ಓಕೆ.. ಆದರೆ ಫಾರ್ಮ್‌ಗೆ ಬಂದ್ರೆ ಒಳ್ಳೆಯದು.. ಅಂತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ipl-2022-rajasthan-royals-player-devdutt-paikkal-complete-1000-runs









