ರಾಜ್ಯಕ್ಕೆ ಕೊರೊನಾ 4ನೇ ಅಲೆ ಎಂಟ್ರಿ ಕೊಟ್ಟಿಲ್ಲ : ಕೆ ಸುದಾಕರ್
ಬೆಂಗಳೂರು: ದೇಶದಲ್ಲಿ ಕೆಲ ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿದೆ. ಹೀಗಾಗಿ ಈಗಾಗಲೇ ರಾಜ್ಯದಲ್ಲಿ ಜನರಿಗೆ ಮಾಸ್ಕ್ ಧರಿಸಲು ಹೇಳಿದರು ಧರಿಸಿಸುತ್ತಿಲ್ಲೆ ಎಂದು ಆರೋಗ್ಯ ಸಚಿವ ಡಾ. ಕೆ ಸುದಾಕರ್ ಹೇಳಿದ್ದಾರೆ.
ಈಗಾಗಲೇ ದೆಹಲಿ ಸೇರಿ ಕೆಲ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗು ಹೆಚ್ಚಾಗುತ್ತಿವೆ. ಈ ಸಂಬಂಧ ಅಧಿಕಾರಿಗೆ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ್ದೇನೆ. ಇನ್ನೂ ರಾಜ್ಯದಲ್ಲಿ ಜನರು ಮೂರನೇ ಡೋಸ್ ಸರಿಯಾಗಿ ತೆಗೆದುಕೊಂಡಿಲ್ಲ. ಅಲ್ಲದೆ 30ಲಕ್ಷ ಜನರು 2ನೇ ಡೋಸ್ ತೆಗೆದುಕೊಂಡಿಲ್ಲ. ಅವರು ಆದಷ್ಟು ಬೇಗೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.
ಇನ್ನೂ ರಾಜ್ಯಕ್ಕೆ 4ನೇ ಅಲೆ ಎಂಟ್ರಿ ಕೊಟ್ಟಿಲ್ಲ. ಪ್ರತಿನಿತ್ಯ ಪರೀಕ್ಷೆಗಳನ್ನು ಮಾಡುತ್ತಿದ್ದು, ಪ್ರಕರಣಗಳು ಏರಿಕೆಯಾಗಿಲ್ಲ. ಅಲ್ಲದೇ ನಿಯಮಗಳನ್ನು ಮತ್ತೆ ಜಾರಿ ಮಾಡುವ ಬಗ್ಗೆ ಈಗಾಗಲೇ ಹೇಳುವುದು ಕಷ್ಟ. ಈಗಿನ ಪರಿಸ್ಥಿತಿಯಲ್ಲಿ ರಾಜ್ಯ ಒಳ್ಳೆಯ ರೀತಿಯಲ್ಲಿ ನಿಯಂತ್ರಣ ಮಾಡಿದೆ. ಜನರು ಕೂಡಡ ಕೆಲ ನಿಯಮಗಳನ್ನು ಪಾಲನೆ ಮಾಡಬೇಕು. ಮಾಸ್ಕನ್ನು ಧರಿಸಿಸುವುದರಿಂದ ಯಾವುದೇ ರೀತಿ ತೊಂದರೆ ಇಲ್ಲ ಎಂದು ಹೇಳಿದರು.