ಹೊಸದಿಲ್ಲಿ, ಮೇ 27 : ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿಐ) ಮೇ 27 ರಂದು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಇದು ಒಂದು ತಿಂಗಳಲ್ಲಿ ಎರಡನೇ ಬಾರಿ ದರ ಕಡಿತವಾಗಿದೆ. ಪರಿಷ್ಕೃತ ಎಫ್.ಡಿ ದರಗಳು ಇಂದಿನಿಂದ (ಮೇ 27) ರಿಂದ ಜಾರಿಯಲ್ಲಿರುತ್ತದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಳೆದ ವಾರ 40 ಬೇಸಿಸ್ ಪಾಯಿಂಟ್‌ಗಳಿಂದ 4% ಕ್ಕೆ ಇಳಿಸಿದ ನಂತರ ಎಸ್.ಬಿ.ಐನ ಸ್ಥಿರ ಠೇವಣಿಗಳ ಮೇಲಿನ ದರದಲ್ಲಿ ತೀವ್ರ ಕಡಿತ ಕಂಡುಬಂದಿದೆ.
2 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಬೃಹತ್ ಠೇವಣಿಗಳ ಮೇಲಿನ ಬಡ್ಡಿಯನ್ನು 50 ಬೇಸಿಸ್ ಪಾಯಿಂಟ್‌ಗಳವರೆಗೆ ಬ್ಯಾಂಕ್ ಕಡಿತಗೊಳಿಸಿದೆ.
ಮಾರ್ಚ್ ನಲ್ಲಿ, ಎಸ್.ಬಿ.ಐ 2020 ರ ಮಾರ್ಚ್ 28 ರಿಂದ ಜಾರಿಗೆ ಬರುವಂತೆ ಎಫ್.ಡಿಗಳ ಮೇಲಿನ ಬಡ್ಡಿದರವನ್ನು 20-50 ಬಿಪಿಎಸ್ ಕಡಿತಗೊಳಿಸಿತು. ಇದು ಮಾರ್ಚ್‌ನಲ್ಲಿ ಎರಡನೇ ದರ ಕಡಿತವಾಗಿತ್ತು. ಈ ಮೊದಲು ಮಾರ್ಚ್ 10 ರಂದು ಬ್ಯಾಂಕ್ ಎಫ್.ಡಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿತ್ತು.
ಹೊಸ ಪರಿಷ್ಕೃತ ಎಫ್‌ಡಿ ದರಗಳ ನಂತರ ಎಸ್.ಬಿಐ ಐದು ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಗರಿಷ್ಠ 5.40% ರಷ್ಟನ್ನು 10 ವರ್ಷಗಳ ವರೆಗೆ ನೀಡುತ್ತದೆ.
ಎಸ್‌ಬಿಐ ಇತ್ತೀಚಿನ ಎಫ್.ಡಿ ಬಡ್ಡಿದರಗಳು
7 ದಿನಗಳಿಂದ 45 ದಿನಗಳವರೆಗೆ – 2.9%
46 ದಿನಗಳಿಂದ 179 ದಿನಗಳವರೆಗೆ – 3.9%
180 ದಿನಗಳಿಂದ 210 ದಿನಗಳವರೆಗೆ – 4.4%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – 4.4%
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ – 5.1%
2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ – 5.1%
3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ – 5.3%
5 ವರ್ಷಗಳು ಮತ್ತು 10 ವರ್ಷಗಳವರೆಗೆ – 5.4%
ಎಸ್.ಬಿ.ಐ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ 50 ಬಿಪಿಎಸ್ ಬಡ್ಡಿದರವನ್ನು ಪಡೆಯುತ್ತಾರೆ. ಇತ್ತೀಚಿನ ಪರಿಷ್ಕರಣೆಯ ನಂತರ, ಹಿರಿಯ ನಾಗರಿಕರು 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಎಫ್‌ಡಿಗಳಲ್ಲಿ 3.4% ರಿಂದ 6.5% ಪಡೆಯುತ್ತಾರೆ.
7 ದಿನಗಳಿಂದ 45 ದಿನಗಳವರೆಗೆ – 3.4%
46 ದಿನಗಳಿಂದ 179 ದಿನಗಳವರೆಗೆ – 4.4%
180 ದಿನಗಳಿಂದ 210 ದಿನಗಳವರೆಗೆ – 4.9%
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – 4.9%
1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ – 5.6%
2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ -5.6%
3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ – 5.8%
5 ವರ್ಷಗಳು ಮತ್ತು10 ವರ್ಷಗಳವರೆಗೆ – 6.2%