ಮೇ 16ರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪ್ರಾರಂಭ
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 16ರಿಂದ ಮತ್ತೆ ಪ್ರಾರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸಧ್ಯ ಮಕ್ಕಳು ಬೇಸಿಗೆ ರಜೆಯಲ್ಲಿದ್ದು, ಮೇ 15ಕ್ಕೆ ಬೇಸಿಗೆ ರಜೆ ಮುಗಿಯಲಿದ್ದು, ಮೇ 16ರಿಂದ ಶಾಲೆಗಳು ಪ್ರಾರಂಭವಾಗಲಿವೆ. ಈ ಸುತ್ತೋಲೆ ಖಾಸಗಿ ಮತ್ತು ಅನಿದಾನಿತ ಶಾಲೆಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಈ ಸುತ್ತೋಲೆಯನ್ನು ಕಳೆದ 3 ವರ್ಷಗಳ ಕಲಿಕಾ ಚಟುವಟಿಕೆಗಳನ್ನು ಅವಲೋಕಿಸಿ ಬಿಡುಗಡೆ ಮಾಡಲಾಗಿದೆ.
ಕಳೆದ 3 ವರ್ಷದಿಂದ ಪೂರ್ಣ ಪ್ರಮಾಣದ ಕಲೆಕೆಯಾಗಿಲ್ಲ. ಕೇವಲ ಶೇ 50-60 ಮಕ್ಕಳಿಗೆ ಮಾತ್ರ ಭೌತಿಕ ಕಲಿಕೆ ನೀಡಲಾಗಿದೆ. ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆಯಾಗಿಲ್ಲವೆಂದು ಎಲ್ಲಾ ಶಾಲೆಗಳಲ್ಲಿ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಿ ಸುತ್ತೋಲೆ ಪ್ರಕಟಿಸಿದೆ.
ಸುತ್ತೋಲೆ ಪ್ರಕಾರ ಶಾಲಾ ಕರ್ತವ್ಯ ದಿನಗಳು ಮೇ16 ರಿಂದ ಅಕ್ಟೋಬರ್ 2ರವರೆಗೆ ಶಾಲಾ ತರಗತಿಗಳು ಮೊದಲ ಅವಧಿಯಲ್ಲಿ ನಡೆಯುತ್ತವೆ. ಅಕ್ಟೋಬರ್ 17ರಿಂದ 2023 ರ ಏಪ್ರಿಲ್ 10ರವರೆಗೆ ಎರಡನೇ ಅವಧಿಯ ತರಗತಿಗಳು ನಡೆಯುತ್ತವೆ. ಅಕ್ಟೋಬರ್ 3 ರಿಂ ಅಕ್ಟೋಬರ್ 16ರವರಗೆ ದಸರಾ ರಜೆ, 2023 ಏಪ್ರಿಲ್ 11 ರಿಂದ 2023 ಮೇ 28ರ ವರೆಗೆ ಬೇಸಿಗೆ ರಜೆ ಇರುತ್ತದೆ.









