ಚಾಮರಾಜನಗರ : ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ ಇರುವುದರಿಂದ ಇಂದಿನಿಂದ ಮಲೆಮಹದೇಶ್ವರ ದೇಗುಲದಲ್ಲಿ ಆನ್ ಲೈನ್ ದರ್ಶನ ಸೇವೆ ಆರಂಭವಾಗಿದೆ. ಪ್ರಾಧಿಕಾರದ ವೆಬ್ ಸೈಟ್ www.mmhillstemple.com ನಲ್ಲಿ ಬೆಳಗ್ಗೆ 4 ರಿಂದ 5.30 ರವರೆಗೆ ಹಾಗೂ ಸಂಜೆ 6.45 ರಿಂದ 8 ರವರೆಗೆ ನಡೆಯುವ ಅಭಿಷೇಕವನ್ನು ಭಕ್ತರು ಆನ್ ಲೈನ್ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.
ಈ ಬಗ್ಗೆ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದು, ಆನ್ ಲೈನ್ ಮೂಲಕವೇ ಭಕ್ತರು ಸೇವೆಯನ್ನು ಕಾಯ್ದಿರಿಸಿ ತಮ್ಮ ತಮ್ಮ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಬಹುದಾಗಿದೆ. ರಾಜ್ಯದೊಳಗಿನ ಭಕ್ತಾದಿಗಳಿಗೆ ಅಂಚೆ ಮೂಲಕ ಬಿಲ್ವ ಪತ್ರೆ, ವಿಭೂತಿ, ಒಣದ್ರಾಕ್ಷಿಯನ್ನು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ಸೇವಾ ವಿವರಗಳನ್ನು ಇಂತಿವೆ
* ಪಂಚ ಕಳಸ ಸಮೇತ ನವರತ್ನ ಕಿರೀಟ ಧಾರಣೆಗೆ 600 ರೂ.
* ಏಕದಶವಾರ ರುದ್ರಾಭಿಷೇಕ, ನವರತ್ನ ಕಿರೀಟ ಧಾರಣೆಗೆ 750 ರೂ.
* ರುದ್ರಾಭಿಷೇಕಕ್ಕೆ 300 ರೂ.
* ಅಷ್ಟೋತ್ತರ ಬಿಲ್ವಾರ್ಚನೆ 300 ರೂ.
* ಪಂಚಾಮೃತ ಅಭಿಷೇಕ 300 ರೂ.
* 1 ತಾಸು ವಿದ್ಯುತ್ ದೀಪಾಲಂಕಾರಕ್ಕೆ 1200 ರೂ.
* ಅರ್ಧ ತಾಸಿಗೆ 750, ಕಾಲು ತಾಸಿಗೆ 500 ರೂ.
* ಹುಲಿ ವಾಹನ, ಬೆಳ್ಳಿ ವಾಹನ, ಬಸವ ವಾಹನ ಸೇವೆಗೆ 200 ರೂ. ನಿಗದಿ ಪಡಿಸಲಾಗಿದೆ.
ಇನ್ನು ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಮಹಾರುದ್ರಾಭಿಷೇಕ, ರುದ್ರತ್ರಿಶತಿ, ನಾಮಕರಣ, ಲಾಡು ಸೇವೆ, ಕಜ್ಜಾಯ ಸೇವೆ, ಬಂಗಾರದ ರಥೋತ್ಸವ, ಸಂಕಷ್ಟಹರ ಚತುರ್ಥಿ, ಉರೊಟ್ಟಿನ ಸೇವೆ, ಅನ್ನ ಬ್ರಹ್ಮೋತ್ಸವ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.








