ಹುಬ್ಬಳ್ಳಿ ಗಲಭೆ ಪ್ರಕರಣ | ಮೌಲ್ವಿ ವಾಸೀಂ ನ್ಯಾಯಾಲಯಕ್ಕೆ ಹಾಜರು
ಹುಬ್ಬಳ್ಳಿ: ನಗರದ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲ್ವಿ ವಾಸೀಂ ಪಠಾಣ್ ಅರೇಸ್ಟ್ ಆಗಿದ್ದು, ಪೊಲೀಸರು ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ.
ಮೌಲ್ವಿಯ ಪೊಲೀಸ್ ಕಸ್ಟಡಿ ಇಂದಿಗೆ (ಬುಧವಾರ) ಅಂತ್ಯವಾದ ಹಿನ್ನೆಲೆ ಆತನನ್ನು ಪೊಲೀಸರು ಹುಬ್ಬಳ್ಳಿಯ 4ನೇ ಹೆಚ್ಚುವರಿ ನ್ಯಾಯಾಲಕ್ಕೆ ಹಾಜರುಪಡಿಸಲಿದ್ದಾರೆ. ಖಾಕಿ ಪಡೆಯು ಆತನನ್ನ 11 ಗಂಟೆಗೆ ಕೋರ್ಟ್‍ಗೆ ಕರೆತರಲಿದೆ.
ಇತ್ತೀಚಿಗೆ ಹಳೇ ಹುಬ್ಬಳ್ಳಿ ಪೊಲೀಸರು ಏ.21ರಂದು ಈತನನ್ನು ಕೋರ್ಟ್‍ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯವು ವಿಚಾರಣೆಗಾಗಿ 5 ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಪೊಲೀಸರು ವಾಸೀಂ ಮತ್ತು ಆತನ ಸಹಚರರನ್ನೂ ಮತ್ತೆ 5 ದಿನ ಕಸ್ಟಡಿಗೆ ಕೇಳಲಿದ್ದಾರೆ. ಆರೋಪಿ ವಾಸೀಂ ಪಠಾಣ್, ಈ ಹಿಂದೆ ಹುಬ್ಬಳ್ಳಿ ಗಲಭೆಗೆ ಸಂಬಂಧಪಟ್ಟಂತೆ ಪ್ರಚೋದನಾಕರಿ ವೀಡಿಯೋ ರಿಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದ.
ವಾಸೀಂ ವೀಡಿಯೋ ರಿಲೀಸ್ ಮಾಡುತ್ತಿದ್ದಂತೆ ಹುಬ್ಬಳ್ಳಿ ಕೇಶ್ವಾಪೂರ ಠಾಣೆ ಇನ್ಸ್‌ಪೆಕ್ಟರ್ ಜಗದೀಶ್ ಹಂಚಿನಾಳ ತಂಡವು ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿತ್ತು.








