DC vs KKR Match | ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್..
ಇಂಡಿಯನ್ ಪ್ರಿಮಿಯರ್ ಲೀಗ್ ನ 41 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಈ ಉಭಯ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿಗೆ ಸೆಣಸಾಡಲಿವೆ.
ಸದ್ಯ ಅಂಕಪಟ್ಟಿಯಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಏಳನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೂ ಏಳು ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ 15 ರನ್ ಗಳಿಂದ ಸೋಲು ಕಂಡಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಕಂ ಬ್ಯಾಕ್ ಮಾಡಲು ಡಿ ಸಿ ಪ್ಲಾನ್ ಮಾಡುತ್ತಿದೆ.
ಉಭಯ ತಂಡಗಳು ಈವರೆಗೂ ಐಪಿಎಲ್ ನಲ್ಲಿ 30 ಮ್ಯಾಚ್ ಗಳಲ್ಲಿ ಮುಖಾಮುಖಿಯಾಗಿದ್ದು, 14 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 16 ಪಂದ್ಯದಲ್ಲಿ ಕೆಕೆಆರ್ ತಂಡ ಗೆದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರ ಸಮಸ್ಯೆ ಇಲ್ಲ. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅಪಾಯಕಾರಿ ಎಂಬುದು ಗೊತ್ತಿರುವ ವಿಚಾರವೇ.
ಅದರಲ್ಲೂ ಡೇವಿಡ್ ವಾರ್ನರ್ ಸ್ಥಿರ ಪ್ರದರ್ಶನ ನೀಡುತ್ತಾರೆ ಅನ್ನೋ ನಂಬಿಕೆ ಇದೆ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಇದೆ.
ಸಫ್ರಝ್ ಖಾನ್ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಯಶ್ ಧೂಲ್ ಅವರಿಗೆ ಅವಕಾಶ ನೀಡಬೇಕು.
ರಿಷಬ್ ಪಂತ್ ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಆಡಬೇಕಿದೆ.
ರೊವ್ಮನ್ ಪೊವೆಲ್ ಫಾರ್ಮ್ ಕಂಡುಕೊಂಡಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
ಇನ್ನು ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್ ಕೆಳ ಕ್ರಮಾಂಕದಲ್ಲಿ ಆಧಾರವಾಗಬೇಕಿದೆ.
ಕಳೆದ ಪಂದ್ಯದಲ್ಲಿ ಕುಲದೀಪ್ ಯಾದವ್ ದುಬಾರಿಯಾದ್ರೂ ತಂಡದ ಟ್ರಂಪ್ ಕಾರ್ಡ್ ಬೌಲರ್.
ಮುಷ್ತಾಫಿಝುರ್ ರಹಮಾನ್ ಜೊತೆ ಮಿಟ್ಚೆಲ್ ಮಾರ್ಶ್ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಇದ್ರಿಂದ ಖಲೀಲ್ ಅಹಮ್ಮದ್ ಹೊರಗುಳಿಯಬೇಕಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ನ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಪೃಥ್ವಿ ಶಾ
ಡೇವಿಡ್ ವಾರ್ನರ್
ರಿಷಬ್ ಪಂತ್
ರೋವ್ಮನ್ ಪೊವೆಲ್
ಸರ್ಫರಾಜ್ ಖಾನ್ / ಯಶ್ ಧೂಳ್
ಲಲಿತ್ ಯಾದವ್
ಅಕ್ಷರ್ ಪಟೇಲ್
ಶಾರ್ದೂಲ್ ಠಾಕೂರ್
ಕುಲದೀಪ್ ಯಾದವ್
ಮುಸ್ತಾಫಿಜುರ್ ರೆಹಮಾನ್
ಖಲೀಲ್ ಅಹ್ಮದ್
DC vs KKR Match Playing Eleven of the Delhi Capitals team









