ವಿದ್ಯುತ್ ಕೊರತೆ – ಕಲ್ಲಿದ್ದಲು ಸಾಗಾಣೆ ಅನುಕೂಲಕ್ಕಾಗಿ 650 ರೈಲುಗಳ ಪ್ರಯಾಣ ರದ್ದು…
ಕಲ್ಲಿದ್ದಲು ಕೊರತೆಯಿಂದಾಗಿ ಅನೇಕ ರಾಜ್ಯಗಳು ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ಕಾರಣ, ಭಾರತೀಯ ರೈಲ್ವೇ ಇಲಾಖೆಯು ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಕಲ್ಲಿದ್ದಲು ಸರಕು ರೈಲು ಸಾಗಾಣೆಯನ್ನ ಸುಲಭಗೊಳಿಸುವುದಕ್ಕಾಗಿ 650 ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲು ಪ್ರಯಾಣಗಳನ್ನು ರದ್ದುಗೊಳಿಸಿದೆ.
ರೈಲು ಪ್ರಯಾಣಗಳನ್ನು ರದ್ದುಗೊಳಿಸುವುದರ ಹೊರತಾಗಿ, ಕಲ್ಲಿದ್ದಲು ಸಾಗಣೆಗೆ ಅನುಕೂಲವಾಗುವಂತೆ ದೇಶದ ಹಲವು ಭಾಗಗಳಲ್ಲಿ 42 ಪ್ಯಾಸೆಂಜರ್ ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.
ಕಲ್ಲಿದ್ದಲು ಗಣಿಗಳಿಂದ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಕಲ್ಲಿದ್ದಲು ತಲುಪಿಸಲು ರೈಲುಗಳ ಸಾಗಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದಷ್ಟು ಬೇಗ ವಿತರಣೆ ಮಾಡಬೇಕಾಗಿರುವುದರಿಂದ ಲೋಡಿಂಗ್ ಸೈಟ್‌ಗಳಿಂದ ಅನ್‌ಲೋಡಿಂಗ್ ಪಾಯಿಂಟ್‌ಗಳವರೆಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಭಾರತೀಯ ರೈಲ್ವೇ ಶುಕ್ರವಾರ ಹೇಳಿದೆ.
ರೈಲ್ವೇ ಸಚಿವಾಲಯದ ವಕ್ತಾರ ರಾಜೀವ್ ಜೈನ್ ನೀಡಿದ ಮಾಹಿತಿಯ ಪ್ರಕಾರ, ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಿಸುವ ರೈಲುಗಳ ವೇಗದ ಚಲನೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆಯು ಇದುವರೆಗೆ ವಿವಿಧ ವಲಯಗಳ ಅಡಿಯಲ್ಲಿ 657 ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಟ್ರಿಪ್‌ಗಳನ್ನು ರದ್ದುಗೊಳಿಸಿದೆ ಎಂದು ತಿಳಿಸಿದರು.








