MI vs RR Match | ರಾಯಲ್ಸ್ ವಿರುದ್ಧವಾದ್ರೂ ಗೆಲ್ಲುತ್ತಾ ಮುಂಬೈ
ಸತತ ಸೋಲುಗಳಿಂದ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡ ಇಂದು ಗೆಲುವಿನ ದಂಡಯಾತ್ರೆ ನಡೆಸುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯ ಡಾ. ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಸಂಜೆ 7 : 30ಕ್ಕೆ ನಡೆಯಲಿದೆ.
ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಯಲ್ಲಿ ಅತ್ಯಂತ ಕಳಫೆ ಪ್ರದರ್ಶನ ನೀಡುತ್ತಿದೆ.
ಆಡಿದ ಎಂಟು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ತಂಡವು ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ರಾಯಲ್ ಗೆಲುವು ದಾಖಲಿಸಿದೆ.
ಸದ್ಯ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಎಂಟು ಪಂದ್ಯಗಳನ್ನಾಡಿದ್ದು, ಆರು ಪಂದ್ಯಗಳಲ್ಲಿ ಗೆದ್ದು, ಎರಡು ಪಂದ್ಯಗಳಲ್ಲಿ ಸೋತು 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಾವುದೇ ಸಮಸ್ಯೆಗಳು ಕಾಣುತ್ತಿಲ್ಲ. ರಾಜಸ್ಥಾನ ರಾಯಲ್ಸ್ ಸತತ 4ನೇ ಗೆಲುವನ್ನು ಎದುರು ನೋಡುತ್ತಿದೆ.
ರಾಯಲ್ಸ್ ತಂಡ ಸೆಟಲ್ ಆಗಿರುವುದರಿಂದ ಚಿಂತೆಯೂ ಇಲ್ಲ. ಜೋಸ್ ಬಟ್ಲರ್, ದೇವದತ್ ಪಡಿಕಲ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ.

ಮಿಡಲ್ ಆರ್ಡರ್ ನಲ್ಲಿ ಸಂಜು ಸ್ಯಾಮ್ಸನ್, ಶಿಮ್ರನ್ ಹೆಟ್ಮಯರ್ ಆಟದ ಜೊತೆಗೆ ರಿಯಾನ್ ಪರಾಗ್ ಕೈ ಜೋಡಿಸಿದ್ದಾರೆ.
ಆಲ್ ರೌಂಡರ್ ಡೆರೆಲ್ ಮಿಚೆಲ್ ಸ್ಥಾನದ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ.
ಬೌಲಿಂಗ್ ನಲ್ಲಿ ಯುಜವೇಂದ್ರ ಚಹಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಜೊತೆಗೆ ಅಶ್ವಿನ್ ವಿಕೆಟ್ ಬೇಟೆಗೆ ಇಳಿದಿದ್ದಾರೆ. ಟ್ರೆಂಟ್ ಬೋಲ್ಟ್, ಪ್ರಸಿಧ್ ಕೃಷ್ಣ ವೇಗಕ್ಕೆ ಕುಲ್ ದೀಪ್ ಸೇನ್ ಬಲ ಕೊಟ್ಟಿದ್ದಾರೆ.
ರಾಜಸ್ಥಾನ ಸ್ಥಿರ ಆಟದ ಮೂಲಕ ಗಮನ ಸೆಳೆಯುತ್ತಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಸಾಕಷ್ಟು ಸಮಸ್ಯೆಗಳಿವೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಮುಂಬೈ ಇಂಡಿಯನ್ಸ್ ಮಕಾಡೆ ಮಲಗಿದೆ.
ಆರಂಭಿಕರಾದ ರೋಹಿತ್ ಶರ್ಮಾ, ಇಶಾನ್ ಕಿಶಾನ್ ಉತ್ತಮ ಆರಂಭ ನೀಡುತ್ತಿಲ್ಲ.
ಬ್ಯಾಟಿಂಗ್ ನಲ್ಲಿ ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ ಮಾತ್ರ ತಂಡಕ್ಕೆ ಆಧಾರವಾಗುತ್ತಿದ್ದಾರೆ.
ಇನ್ನುಳಿದಂತೆ ಡೆವಾಲ್ಡ್ ಬ್ರೆವಿಸ್, ಕಿರಾನ್ ಪೊಲಾರ್ಡ್ ಟಚ್ ಕಳೆದುಕೊಂಡಿದ್ದಾರೆ.
ಇನ್ನು ಬೌಲಿಂಗ್ ವಿಭಾಗ ತೀರಾ ಸಪ್ಪೆಯಾಗಿದೆ. ಜಸ್ಪ್ರಿತ್ ಬೂಮ್ರಾ ಮತ್ತು ಜಯದೇವ್ ಉನಾದ್ಕಟ್ ಪರಿಣಾಮಕಾರಿಯಾಗುತ್ತಿಲ್ಲ.
ಮುಖ್ಯವಾಗಿ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ನಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವತ್ತ ಚಿತ್ತ ಹರಿಸಿಲ್ಲ. ಜೋಫ್ರಾ ಆರ್ಚೆರ್ ಅನುಪಸ್ಥಿತಿ ಎದ್ದು ಕಾಣುತ್ತಿದೆ.
RR vs MI Match Prediction Rajasthan Royals And Mumbai Indians








