MI vs RR Match | ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11
ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ರಾಜಸ್ತಾನ್ ರಾಯಲ್ಸ್ ತಂಡ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಸವಾರಿ ಮಾಡಲು ಸಜ್ಜಾಗಿದೆ.
ಮುಂಬೈ ನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಸತತ ಸೋಲುಗಳಿಂದ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡ ಇಂದು ಗೆಲುವಿನ ದಂಡಯಾತ್ರೆ ನಡೆಸುತ್ತಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಯಲ್ಲಿ ಅತ್ಯಂತ ಕಳಫೆ ಪ್ರದರ್ಶನ ನೀಡುತ್ತಿದೆ.
ಆಡಿದ ಎಂಟು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ತಂಡವು ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ರಾಯಲ್ ಗೆಲುವು ದಾಖಲಿಸಿದೆ.
ಸದ್ಯ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಎಂಟು ಪಂದ್ಯಗಳನ್ನಾಡಿದ್ದು, ಆರು ಪಂದ್ಯಗಳಲ್ಲಿ ಗೆದ್ದು, ಎರಡು ಪಂದ್ಯಗಳಲ್ಲಿ ಸೋತು 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯಾವುದೇ ಸಮಸ್ಯೆಗಳು ಕಾಣುತ್ತಿಲ್ಲ. ರಾಜಸ್ಥಾನ ರಾಯಲ್ಸ್ ಸತತ 4ನೇ ಗೆಲುವನ್ನು ಎದುರು ನೋಡುತ್ತಿದೆ. ರಾಯಲ್ಸ್ ತಂಡ ಸೆಟಲ್ ಆಗಿರುವುದರಿಂದ ಚಿಂತೆಯೂ ಇಲ್ಲ. ಜೋಸ್ ಬಟ್ಲರ್, ದೇವದತ್ ಪಡಿಕಲ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ಸಂಜು ಸ್ಯಾಮ್ಸನ್, ಶಿಮ್ರನ್ ಹೆಟ್ಮಯರ್ ಆಟದ ಜೊತೆಗೆ ರಿಯಾನ್ ಪರಾಗ್ ಕೈ ಜೋಡಿಸಿದ್ದಾರೆ. ಆಲ್ ರೌಂಡರ್ ಡೆರೆಲ್ ಮಿಚೆಲ್ ಸ್ಥಾನದ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಇನ್ನು ಬೌಲಿಂಗ್ ನಲ್ಲೂ ಕೂಡ ರಾಯಲ್ಸ್ ತಂಡ ಸಾಲಿಡ್ ಆಗಿದೆ. ಸ್ಪಿನ್ನರ್ ಯುಜವೇಂದ್ರ ಚಹಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಅಶ್ವಿನ್ ವಿಕೆಟ್ ಬೇಟೆಗೆ ಇಳಿದಿದ್ದಾರೆ. ಪವರ್ ಪ್ಲೇನಲ್ಲಿ ಟ್ರೆಂಟ್ ಬೋಲ್ಟ್, ಪ್ರಸಿಧ್ ಕೃಷ್ಣ ಎದುರಾಳಿ ತಂಡದ ಬ್ಯಾಟರ್ ಗಳಿಗೆ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಪವರ್ ಪ್ಲೇ ನಲ್ಲಿ ವಿಕೆಟ್ ತೆಗೆದು ತಂಡಕ್ಕೆ ನೆರವಾಗುತ್ತಿದ್ದಾರೆ. ಇವರ ಜೊತೆಗೆ ಯುವ ವೇಗಿ ಕುಲ್ ದೀಪ್ ಸೇನ್ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ದಾರೆ. ಮಿಡಲ್ ಮತ್ತು ಡೆತ್ ಔವರ್ ಗಳಲ್ಲಿ ಕುಲ್ ದೀಪ್ ತಮ್ಮ ಚಾಣಾಕ್ಷ ವೇಗದ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದಾರೆ.
ಒಟ್ಟಾರೆ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ತಂಡಕ್ಕೆ ಹೋಲಿಕೆ ಮಾಡಿಕೊಂಡರೇ ಬಲಿಷ್ಠವಾಗಿದೆ.
ತಂಡದ ಪ್ಲೇಯಿಂಗ್ ಇಲೆವೆನ್
ಜೋಸ್ ಬಟ್ಲರ್
ದೇವದತ್ ಪಡಿಕ್ಕಲ್
ಸಂಜು ಸ್ಯಾಮ್ಸನ್ (c & wk)
ಶಿಮ್ರಾನ್ ಹೆಟ್ಮೆಯರ್,
ಡೇರಿಲ್ ಮಿಚೆಲ್
ರಿಯಾನ್ ಪರಾಗ್
ರವಿಚಂದ್ರನ್ ಅಶ್ವಿನ್
ಟ್ರೆಂಟ್ ಬೌಲ್ಟ್
ಕುಲದೀಪ್ ಸೇನ್
ಪ್ರಸಿದ್ಧ್ ಕೃಷ್ಣ
ಯುಜ್ವೇಂದ್ರ ಚಹಾಲ್
MI vs RR Match Rajasthan Royals Playing 11









