ಬೆಂಗಳೂರು : ಕಾಂಗ್ರೆಸ್ ನವರು ಕ್ರೂರ ಮನಸ್ಥಿತಿ ಹೊಂದಿದ್ದಾರೆ ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾವು ಆಗಿರುವಂತೆ ಎಡಿಟ್ ಮಾಡಿರುವ ಪೋಟೋವೊಂದು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ಕೆಲ ದುಷ್ಕರ್ಮಿಗಳು ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾವು ಆಗಿ ಮಲಗಿರುವ ಮತ್ತು ದೇಹದ ಮೇಲೆ ಮಾಲೆ ಹಾಕಿರುವ ಹಾಗೇ ಪೋಟೋವನ್ನು ಎಡಿಟ್ ಮಾಡಿದ್ದಾರೆ. ಅಲ್ಲದೆ ಎಡಿಟ್ ಮಾಡಿರುವ ಪೋಟೋದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತಲೆ ತಗ್ಗಿಸಿ ಶ್ರದ್ದಾಂಜಲಿ ಸಲ್ಲಿಸುವ ರೀತಿಯಲ್ಲಿ ಕಾಣುತ್ತದೆ. ಈ ಪೋಟೋ ಹೆಚ್ಚು ಕಾಂಗ್ರೆಸ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಸಚಿವ ಸಿ.ಟಿ ರವಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಡಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ವಾಟ್ಸಪ್ ಗ್ರೂಪ್ ನ ಸ್ಕ್ರೀನ್ ಶ್ಯಾಟ್ ಅನ್ನು ಟ್ವಿಟರ್ ನಲ್ಲಿ ಹಾಕಿ, ಇದು ಕಾಂಗ್ರೆಸ್ಸಿಗರ ಕೀಳು ಮನಸ್ಥಿತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾವನ್ನು ಬಯಸುವ ಕ್ರೂರ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ. ಸ್ವತಃ ಈ ಬಗ್ಗೆ ನಾನೇ ದೂರು ಕೊಡುತ್ತೇನೆ. ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು
ಕಾಂಗ್ರೆಸ್ ಸಂಪುಟದಲ್ಲಿ ಮೇಜರ್ ಸರ್ಜರಿ: ಮೂವರು ಸಚಿವರಿಗೆ ಗೇಟ್ ಪಾಸ್? ಈ ಮೂವರಿಗೆ ಒಲಿಯಲಿದೆಯೇ ಲಕ್?
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಬಿರುಗಾಳಿ ಎದ್ದಿದೆ. ಮುಖ್ಯವಾಗಿ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಚಿವರಿಲ್ಲದಿರುವುದು ಸರ್ಕಾರದ ವರ್ಚಸ್ಸಿಗೆ ಧಕ್ಕೆ...








