CSK vs SRH Match | ಚೆನ್ನೈ ತಂಡದಲ್ಲಿ ಯಾರು ಇನ್ ಯಾರು ಔಟ್..
ಐಪಿಎಲ್ ನ 46ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಜೋಷ್ ನೊಂದಿಗೆ ಕಣಕ್ಕಿಳಿಯಲಿದೆ.
ತಲಾ ಎಂ.ಎಸ್.ಧೋನಿ ಮತ್ತೆ ತಂಡದ ಚುಕ್ಕಾಣಿ ಹಿಡಿದಿದ್ದು, ತಂಡ ಗತ ವೈಭವವನ್ನು ಪಡೆದುಕೊಳ್ಳುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಎಂಸಿಎ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಡರ್ಸ್ ಹೈದರಾಬಾದ್ ವಿರುದ್ಧ ಗುದ್ದಾಟ ನಡೆಸಲಿದೆ.
ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಹೈದರಬಾದ್ ತಂಡ ಗೆಲುವು ಸಾಧಿಸಿತ್ತು.
ಹೀಗಾಗಿ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇಡು ತೀರಿಸಿಕೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.
ಸರ್ ರವೀಂದ್ರ ಜಡೇಜಾ ಸಾರಥ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ಪಂದ್ಯಗಳನ್ನಾಡಿದ್ದು, ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಆರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಚೆನ್ನೈ ತಂಡ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 11 ರನ್ ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಅಂಬಾಟಿ ರಾಯುಡು 78 ರನ್ ಗಳಿಸಿದ್ದರು.
ಈ ಎರಡೂ ತಂಡಗಳು ಈವರೆಗೂ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ 17 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ಮೇಲು ಗೈ ಸಾಧಿಸಿದೆ.
ಚೆನ್ನೈ ತಂಡ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೇ ಹೈದರಾಬಾದ ತಂಡ ಐದು ಪಂದ್ಯಗಳಲ್ಲಿ ಗೆದ್ದಿದೆ.

ತಂಡಗಳ ಬಲಾಬಲದ ವಿಚಾರಕ್ಕೆ ಬಂದ್ರೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಮುಖ್ಯವಾಗಿ ಆರಂಭಿಕ ರುತುರಾಜ್ ಗಾಯಕ್ವಾಡ್ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಇನ್ನು ಮತ್ತೊಬ್ಬ ಆರಂಭಿಕ ರಾಬಿನ್ ಉತ್ತಪ್ಪ ಒಳ್ಳೆ ಫಾರ್ಮ್ ನಲ್ಲಿದ್ದರೂ ಸ್ಥಿರ ಆಟದ ಪ್ರದರ್ಶನ ಬರುತ್ತಿಲ್ಲ. ಮೊಯಿನ್ ಅಲಿ ಸ್ಥಾನದಲ್ಲಿ ಬರುತ್ತಿರುವ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್, ಬ್ಯಾಟಿಂಗ್ ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮೊಯಿನ್ ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.
ಮಿಡಲ್ ಆರ್ಡರ್ ನಲ್ಲಿ ಅಂಬಾಟಿ ರಾಯುಡು, ಶಿವಂ ದುಬೆ, ಎಂ.ಎಸ್,ಧೋನಿ ಮಾತ್ರ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಆದ್ರೆ ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇನ್ನುಳಿಂದ ಪ್ರಿಟೋರಿಯಸ್, ಮಹೀಶ್ ತೀಕ್ಷಣ, ಮುಖೇಶ್ ಚೌಧರಿ ಬೌಲಿಂಗ್ ನಲ್ಲಿ ವಿಕೆಟ್ ಪಡೆಯುತ್ತಿದ್ದರೂ ಉಳಿದವರಿಂದ ಸಾಥ್ ಸಿಗುತ್ತಿಲ್ಲ.
ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ಅಂಬಟಿ ರಾಯುಡು, ಎಂಎಸ್ ಧೋನಿ (WK), ರವೀಂದ್ರ ಜಡೇಜಾ (c), ಡ್ವೇನ್ ಬ್ರಾವೋ, ಡ್ವೈನ್ ಪ್ರಿಟೋರಿಯಸ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ
CSK vs SRH Match Chennai Team playing 11








