ನವದೆಹಲಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ನೌಕೆ “ವಿಕ್ರಾಂತ” ಅನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗುವುದು ಎಂದು ವರದಿಗಳು ತಿಳಿಸಿವೆ.
ಮೇ ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗುತ್ತಿದ್ದೆ. ಈ ವಿಮಾನವಾಹಕ ನೌಕೆಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) ನಿರ್ಮಿಸಿದೆ.
ವಿಮಾನವಾಹಕ ನೌಕೆಯನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದ ನಂತರ “ಐಎನ್‌ಎಸ್ ವಿಕ್ರಾಂತ್” ಎಂದು ಹೆಸರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕೇರಳದ ಕೊಚ್ಚಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‌ಎಲ್ ನಿರ್ದೇಶಕ (ತಾಂತ್ರಿಕ) ಬೆಜಾಯ್ ಭಾಸ್ಕರ್, ಮುಂದಿನ ಕೆಲವು ವಾರಗಳಲ್ಲಿ ವಿಮಾನವಾಹಕ ನೌಕೆಯ ಅಂತಿಮ ಸಮುದ್ರ ಪ್ರಯೋಗವನ್ನು ನಡೆಸಲಾಗುವುದು. ಈ ವರ್ಷದ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದಂದು ಸ್ವದೇಶಿ ವಿಮಾನವಾಹಕ ನೌಕೆ (ಐಎಸಿ) ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ವಿಮಾನವಾಹಕ ನೌಕೆಯ ಸುಮಾರು 60 ಪ್ರತಿಶತ ಭಾಗಗಳು ಸ್ಥಳೀಯವಾಗಿದ್ದು, ಉಳಿದ 40 ಪ್ರತಿಶತವನ್ನು ಆಮದು ಮಾಡಿಕೊಳ್ಳಲಾಗಿದೆ.








