ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಹೈದರಾಬಾದ್: ಕೆಲಸಕ್ಕಾಗಿ ವಲಸೆ ಬಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ರೈಲು ನಿಲ್ದಾಣದಲ್ಲಿ ನಡೆದಿದೆ.
25 ವರ್ಷದ ಮಹಿಳೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಗುಂಟೂರು- ರೆಪಲ್ಲೆ ಪ್ಯಾಸಂಜರ್ ರೈಲಿನಲ್ಲಿ ರೆಪಳ್ಳೆ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಶನಿವಾರ ತಡರಾತ್ರಿ ಗುಂಟೂರು ರೈಲು ನಿಲ್ದಾಣದಲ್ಲೇ ತಂಗಿದಾಗ ಘಟನೆ ಸಂಭವಿಸಿದೆ.
ನಡೆದಿದ್ದೇನು?: 25 ವರ್ಷದ ಮಹಿಳೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಕಲ್ಲಿನ ಕೆಲಸಕ್ಕಾಗಿ ಪ್ರಕಾಶಂ ಜಿಲ್ಲೆಯಿಂದ ಗುಂಟೂರು ಜಿಲ್ಲೆಗೆ ಆಗಮಿಸಿದ್ದರು. ಗುಂಟೂರು- ರೆಪಲ್ಲೆ ಪ್ಯಾಸಂಜರ್ ರೈಲಿನಲ್ಲಿ ಬಂದು, ರೆಪಳ್ಳೆ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಇಳಿದಿದ್ದರು.
ಆ ರಾತ್ರಿ ಗುಂಟೂರು ರೈಲು ನಿಲ್ದಾಣದಲ್ಲೇ ತಂಗಲು ನಿರ್ಧರಿಸಿದರು. ರಾತ್ರಿ 1 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಬಳಿ ಬಂದು ಮಹಿಳೆಯ ಪತಿಯನ್ನು ಎಬ್ಬಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ಕೇಳಿ ಎಚ್ಚೆತ್ತುಕೊಂಡ ಮಹಿಳೆ ಮಧ್ಯಪ್ರವೇಶಿಸಿದ್ದಾಳೆ.
ಆಗ ಆ ದಾಳಿಕೋರರು ಮಹಿಳೆಯನ್ನು ಹಿಡಿದು ಪ್ಲಾಟ್‍ಫಾರ್ಮ್‍ನ ತುದಿಯಲ್ಲಿರುವ ಪೊದೆಗಳ ಹಿಂದೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಮಹಿಳೆಯ ಪತಿ ರೇಪಳ್ಳ ಪೊಲೀಸ್ ಠಾಣೆಗೆ ಧಾವಿಸಿ ಘಟನೆಯ ಬಗ್ಗೆ ತಿಳಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ದಾಳಿಕೋರರು ಪರಾರಿಯಾಗಿದ್ದಾರೆ.
ಇಬ್ಬರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಸದ್ಯ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ.








