ಕೇರಳ ಕರಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 6 ಮಂದಿಯನ್ನ ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್
ಕೋಝಿಕ್ಕೋಡ್ ಬಳಿಯ ಬೇಪೋರ್ ಕರಾವಳಿಯಲ್ಲಿ ಇಂಜಿನ್ ರೂಮ್‌ಗೆ ನೀರು ನುಗ್ಗಿ ಸಂಕಷ್ಟಕ್ಕೆ ಸಿಲುಕಿದ್ದ ಕೇರಳದ ಎಂಎಸ್‌ವಿ ಮಲಬಾರ್ ಲೈಟ್‌ನ ಎಲ್ಲಾ ಆರು ಸಿಬ್ಬಂದಿಯನ್ನು ಭಾನುವಾರ ಮುಂಜಾನೆ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.
ಸಂಕಷ್ಟದಲ್ಲಿರುವ ನೌಕೆಯ ಬಗ್ಗೆ ಮುಂಬೈನ ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರದಿಂದ ಸೂಚನೆ ಮೇರೆಗೆ ಬೇಪೋರ್‌ನಿಂದ ಕೋಸ್ಟ್ ಗಾರ್ಡ್ ಹಡಗನ್ನು ನಿಯೋಜಿಸಲಾಯಿತು.
ಎಂಎಸ್‌ವಿ ಮಲಬಾರ್ ಲೈಟ್, ನಿರ್ಮಾಣ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ತುಂಬಿಕೊಂಡು ಬೇಪೋರ್‌ನಿಂದ ಲಕ್ಷದ್ವೀಪದ ಅಂದ್ರಾತ್‌ಗೆ ಪ್ರಯಾಣಿಸುತ್ತಿತ್ತು.
ಸಿಬ್ಬಂದಿಗಳು ಮುಳುಗುತ್ತಿದ್ದ ಹಡಗಿನಿಂದ ಲೈಫ್ ಬೋಟ್‌ಗೆ ಹಾರಿ ತೆರೆದ ಸಮುದ್ರದಲ್ಲಿ ತೇಲುತ್ತಿದ್ದಾಗ ಅವರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದರು. Indian Coast Guard rescues 6 persons from distressed vessel off Kerala coast








