ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ರಾಜಶೇಕರ್ ಮನಸೂರ ಅವರು ನಿಧನ
ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ರಾಜಶೇಕರ್ ಮನಸೂರ ಅವರು ನಿಧನರಾಗಿದ್ದಾರೆ, ಹಿಂದೂಸ್ತಾನಿ ಸಂಗೀತದ ಮತ್ತೊಂದು ಕೊಂಡಿ ಕಳಚಿಕೊಂಡಿದೆ. ಪ್ರಖ್ಯಾತ ಹಿಂದೂಸ್ತಾನಿ ಗಾಯಕರಾಗಿದ್ದ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಅವರ 8 ಜನ ಮಕ್ಕಳಲ್ಲಿ ಏಕೈಕ ಪುತ್ರರಾಗಿ ಧಾರವಾಡದಲ್ಲಿ ಜನಿಸಿದರು.
1942 ಡಿ 16 ರಂದು ಜನಿಸಿದರು. ಮನೆಯಲ್ಲಿ ಸಂಗೀತದ ವಾತಾವರಣ ಹೀಗಾಗಿ ಅಪ್ರಜ್ಞಾಪೂರ್ವಕವಾಗಿಯೂ ಹಿಂದುಸ್ತಾನಿ ಸಂಗೀತದ ಅನೇಕ ರಾಗಗಳು ರಾಜಶೇಖರ ಅವರ ಮನಸ್ಸು, ಮಿದುಳು ಪ್ರವೇಶಿಸಿದ್ದವು. ಬಾಲ್ಯದಿಂದಲೇ ರಾಜಶೇಖರ್ ಅವರಿಗೆ ಸಂಗೀತ ಸಂಸ್ಕಾರ ಲಭಿಸಿತ್ತು.
ಪಂ.ರಾಜಶೇಖರ್ ಮನ್ಸೂರ್ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಹಾಗೂ ಇಂಗ್ಲೆಂಡ್‌ನಿಂದ ಸಂಶೋಧನಾ ಪದವಿ ಪಡೆದು ಸುಮಾರು 35 ವರ್ಷಗಳ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಪಂ. ರಾಜಶೇಖರ್ ಮನ್ಸೂರ್ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾ ಸಿರಿ ಗೌರವ, ಕರ್ನಾಟಕ ರಾಜೋತ್ಸವ ಪ್ರಶಸ್ತಿಗಳು ಬಂದಿವೆ.
Rajshekhar Mansur, classical singer and former professor of English, passed away in Bengaluru








