ಲಾಕ್ ಡೌನ್ ಸಮಯದಲ್ಲಿ ಅಸುರಕ್ಷಿತ ಲೈಂಗಿಕತೆಯಿಂದ 85,000 ಮಂದಿ HIV ಪಾಸಿಟಿವ್ ಗೆ ತುತ್ತು..
2020-21ರಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ 85,000 ಕ್ಕೂ ಹೆಚ್ಚು ಜನರು ಅಸುರಕ್ಷಿತ ಲೈಂಗಿಕತೆಯಿಂದ HIV ರೋಗಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. 10,498 ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ, ಆಂಧ್ರಪ್ರದೇಶ ಮತ್ತು ಕರ್ನಾಟಕ ಕ್ರಮವಾಗಿ 9,521 ಮತ್ತು 8,947 ಪ್ರಕರಣಗಳನ್ನು ವರದಿ ಮಾಡಿದೆ.
ಮಧ್ಯಪ್ರದೇಶ ಮೂಲದ RTI ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರ RTI ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸರ್ಕಾರವು ಈ ಡೇಟಾವನ್ನು ಒದಗಿಸಿದೆ. ಆಶ್ಚರ್ಯಕರವಾಗಿ, HIV ಅಂಕಿ ಅಂಶಗಳನ್ನ ಸ್ವತಃ ಸೋಂಕಿತರೇ ವರದಿ ಮಾಡಿದ ಆಧಾರದ ಮೇಲೆ ಸಂಗ್ರಹಿಸಲಾಗಿದೆ, ಇದು HIV/AIDS ಹತ್ತಿಕೊಂಡಿರುವ ಕಳಂಕ ಕ್ರಮೇಣ ಕಣ್ಮರೆಯಾಗುತ್ತಿರುವುದನ್ನ ತೋರಿಸುತ್ತಿದೆ.
ಅಸುರಕ್ಷಿತ ಲೈಂಗಿಕತೆಯ ಕಾರಣದಿಂದಾಗಿ HIV ಹರಡಿರುವ ಸಂಖ್ಯೆಯಲ್ಲಿ ಉತ್ತರ ಪ್ರದೇಶವು 6,905, ಪ್ರಕರಣಗಳನ್ನ ವರದಿಮಾಡಿದೆ. ಮೊದಲ ಲಾಕ್‌ಡೌನ್ ಸಮಯದಲ್ಲಿ ತೆಲಂಗಾಣ (6,505) ಮತ್ತು ಬಿಹಾರ (5,462) ಸೋಂಕುಗಳನ್ನ ವರದಿ ಮಾಡಿದೆ. ಗುಜರಾತ್, ತಮಿಳುನಾಡು ಮತ್ತು ರಾಜಸ್ಥಾನದಲ್ಲೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
RTI ಕಾರ್ಯಕರ್ತ ಚಂದ್ರಶೇಖರ್ ಗೌರ್ ಗೆ ಕಳುಹಿಸಲಾದ ಅಧಿಕೃತ ಉತ್ತರದ ಪ್ರಕಾರ, 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 85,268 ಜನರು ಅಸುರಕ್ಷಿತ ಲೈಂಗಿಕತೆಯಿಂದ ಎಚ್‌ಐವಿ ಹರಡುವಿಕೆಗೆ ತುತ್ತಾಗಿದ್ದಾರೆ.
ಇದಲ್ಲದೆ ದೇಶಾದ್ಯಂತ ‘ತಾಯಿಯಿಂದ ಮಗುವಿಗೆ’ ಹರಡುವ ಪ್ರಕರಣಗಳಲ್ಲಿ 300 ಪ್ರಕರಣಗಳು ವರದಿಯಾಗಿವೆ. 300 ಪ್ರಕರಣಗಳಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕವು ಅಂತಹ ತಲಾ 31 ಪ್ರಕರಣಗಳೊಂದಿಗೆ ಮತ್ತೆ ಅಗ್ರಸ್ಥಾನದಲ್ಲಿದೆ, ಒಡಿಶಾ 24 ಪ್ರಕರಣಗಳೊಂದಿಗೆ ರಾಜಸ್ಥಾನ (22), ಯುಪಿ (21), ಎಂಪಿ (20,) ಗುಜರಾತ್ ಮತ್ತು ತೆಲಂಗಾಣ (ತಲಾ 18 ಪ್ರಕರಣಗಳು) ಎಪಿ (15) , ಪಶ್ಚಿಮ ಬಂಗಾಳ (13) ಮತ್ತು ಬಿಹಾರದಲ್ಲಿ 10 ಪ್ರಕರಣಗಳಿವೆ,” ಎಂದು ಆರ್‌ಟಿಐ ಉತ್ತರದಲ್ಲಿ ತಿಳಿದುಬಂದಿದೆ.








