ADVERTISEMENT
Friday, April 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

KKR vs RR Match | ಗೆಲುವಿನ ರಾಯಲ್ಸ್ ಗೆ ನೈಟ್ ರೈಡರ್ಸ್ ಸವಾಲ್

Mahesh M Dhandu by Mahesh M Dhandu
May 2, 2022
in Newsbeat, Sports, ಕ್ರಿಕೆಟ್
kkr-vs-rr-match-Rinku Singh leads Kolkata Knight Riders to seven-wicket win

kkr-vs-rr-match-Rinku Singh leads Kolkata Knight Riders to seven-wicket win

Share on FacebookShare on TwitterShare on WhatsappShare on Telegram

KKR vs RR Match | ಗೆಲುವಿನ ರಾಯಲ್ಸ್ ಗೆ ನೈಟ್ ರೈಡರ್ಸ್ ಸವಾಲ್

ಇಂಡಿಯನ್ ಪ್ರಿಮಿಯರ್ ಲೀಗ್ ನ 47ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ – ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿಯಾಗುತ್ತಿವೆ.  

Related posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

April 17, 2026
ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

April 17, 2026

ತಂಡಗಳ ಬಲಾಬಲ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ  ಸಾಂಘೀಕ ಹೋರಾಟದ ಕೊರತೆ ಇದೆ. ಜೊತೆಗೆ ಬಿಗ್ ಸ್ಟಾರ್ ಗಳು ಮಿಂಚದೇ ಇರೋದು ಕೂಡ ಕೆಕೆಆರ್ ತಂಡದ ಹಿನ್ನಡೆಗೆ ಕಾರಣವಾಗಿದೆ. ಮುಖ್ಯವಾಗಿ ಆರಂಭಿಕರ ವೈಫಲ್ಯ ಕೆಕೆಆರ್ ತಂಡವನ್ನು ಪದೇ ಪದೇ ಕಾಡುತ್ತಿದೆ. ಕಳೆದ 4 ಪಂದ್ಯಗಳಲ್ಲಿ 4 ಬಾರಿ ಆರಂಭಿಕರನ್ನು ಬದಲಿಸಿದರೂ ಫಲಿತಾಂಶ ಬದಲಾಗಲಿಲ್ಲ. ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನ ಸ್ಥಾನದಿಂದ, ಮಿಡಲ್ ಆರ್ಡರ್ ಮತ್ತು ಫಿನಿಷರ್ ಸ್ಥಾನಕ್ಕೆ ಬದಲಿಸಿದರೂ ಪ್ರಯೋಜನವಾಗಿಲ್ಲ. ವರುಣ್ ಚಕ್ರವರ್ತಿ, ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿದ ಪ್ಯಾಟ್ ಕಮಿನ್ಸ್ ತಂಡಕ್ಕೆ ಭಾರವಾಗಿದ್ದಾರೆ. ಆ್ಯಂಡ್ರೆ ರಸೆಲ್, ನಾಯಕ ಶ್ರೇಯಸ್ ಅಯ್ಯರ್, ನಿತೇಶ್ ರಾಣಾ ಮತ್ತು ಅನುಭವಿ ಉಮೇಶ್ ಯಾದವ್ ಮಾತ್ರ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಸುನೀಲ್ ನರೈನ್, ಬಾಬಾ ಇಂದ್ರಜಿತ್ ಸ್ಥಿರ ಆಟವಾಡುತ್ತಿಲ್ಲ.

ಇತ್ತ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್ ಉತ್ತಮ ಆರಂಭ ನೀಡುತ್ತಿದ್ದಾರೆ. ನಾಯಕ ಸಂಜು ಸ್ಯಾಮ್ಸನ್, ಪರಾಗ್ ಮತ್ತು ಮಿಚೆಲ್ ಮಿಂಚುತ್ತಿದ್ದಾರೆ. ಶಿಮ್ರಾನ್ ಹಿಟ್ಮೇಯರ್ ಅಬ್ಬರಿಸಬೇಕಾಗಿದೆ. ಬೌಲಿಂಗ್ ನಲ್ಲಿ ಯಜುವೇಂದ್ರ ಚಹಲ್ ಚಮಕ್ ತೋರಿದ್ದಾರೆ. ಅಶ್ವಿನ್ ಸೈಲೆಂಟ್ ಫರ್ಫಾಮರ್. ಪ್ರಸಿಧ್ ಮತ್ತು ಕುಲ್ ದೀಪ್ ಸೇನ್ ವಿಕೆಟ್ ಬೇಟೆಯಾಡಿದ್ದಾರೆ. ಅನುಭವಿ ಟ್ರೆಂಟ್ ಬೋಲ್ಟ್ ಒಂಚೂರು ಮೊನಚು ಕಂಡುಕೊಳ್ಳಬೇಕಿದೆ. ಇಷ್ಟಾದರೆ ರಾಜಸ್ಥಾನ ತಂಡವನ್ನು ಸೋಲಿಸುವುದು ಕಷ್ಟ.

Kolkata Knight Riders Rajasthan Royals match preview  saaksha tv
Kolkata Knight Riders Rajasthan Royals match preview saaksha tv

ಅಂದಹಾಗೆ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ತಂಡಗಳು ಈ ಆವೃತ್ತಿಯಲ್ಲಿ ತಲಾ 9 ಪಂದ್ಯಗಳನ್ನಾಡಿವೆ. ಈ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಪಂದ್ಯಗಳಲ್ಲಿ ಗೆದ್ದು, ಆರು ಮ್ಯಾಚ್ ಗಳಲ್ಲಿ ಸೋಲು ಕಂಡಿದೆ. ಇತ್ತ ರಾಜಸ್ಥಾನ್ ರಾಯಲ್್ ತಂಡ ಆರು ಪಂದ್ಯಗಳಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.

ಅಂಕಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ತಂಡ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಈ ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಕಳೆದ ಬಾರಿ ಸೆಣಸಾಟ ನಡೆಸಿದ್ದಾಗ ರಾಜಸ್ಥಾನ್ ರಾಯಲ್ಸ್ ತಂಡ ಏಳು ರನ್ ಗಳೊಂದಿಗೆ ಗೆಲುವು ಸಾಧಿಸಿತ್ತು.

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಈ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕು ವಿಕೆಟ್ ಗಳಿಂದ ಗೆದ್ದಿತ್ತು.

ಮತ್ತೊಂದೆಡೆ ಸಂಜು ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿದೆ. ಈ ಪಂದ್ಯದಲ್ಲಿ ಜೋಸ್ ಬಟ್ಲರ್ 67 ರನ್ ಗಳಿಸಿದ್ದರು.

ರಾಜಸ್ಥಾನ್ ಇಂದಿನ ಪಂದ್ಯ ಗೆದ್ದರೇ ಪ್ಲೇ ಆಫ್ಸ್ ಗೆ ಮತ್ತಷ್ಟು ಹತ್ತಿರವಾಗಲಿದೆ. ಹೀಗಾಗಿ ಗೆಲುವಿಗಾಗಿ ಸಾಕಷ್ಟು ಪ್ಲಾನ್ ಮಾಡಿಕೊಂಡಿದೆ. Kolkata Knight Riders Rajasthan Royals match preview

Tags: #Saaksha TVipl 2022Kolkata Knight Ridersrajasthan royals
ShareTweetSendShare
Join us on:

Related Posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

by Shwetha
April 17, 2026
0

ನವದೆಹಲಿ ಲೋಕಸಭೆಯಲ್ಲಿ ನಿನ್ನೆ ನಡೆದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಮೇಲಿನ ಸುದೀರ್ಘ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

by Shwetha
April 17, 2026
0

ಬೆಂಗಳೂರು ಅಥವಾ ಇತರ ನಗರಗಳಲ್ಲಿ ಪರಿಚಯವಿಲ್ಲದ ಮಹಿಳೆಯರನ್ನು ಅಥವಾ ಸಹೋದ್ಯೋಗಿಗಳನ್ನು ಆಂಟಿ ಎಂದು ಕರೆಯುವುದು ಹಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವರು ಗೌರವದಿಂದ ಕರೆದರೆ, ಇನ್ನು ಕೆಲವರು ಗೇಲಿ ಮಾಡಲು...

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

by Shwetha
April 17, 2026
0

ಗ್ರಾಮೀಣ ಭಾಗದ ರೈತರಲ್ಲಿ ಜಮೀನಿನ ಹಕ್ಕು ಮತ್ತು ಗಡಿ ವಿವಾದಗಳು ಸರ್ವೇ ಸಾಮಾನ್ಯ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಪೋಡಿ. ಬಹುತೇಕ ರೈತರಿಗೆ ಪೋಡಿ ಎಂದರೆ ಏನು,...

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

by Shwetha
April 17, 2026
0

ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಹಲವು ವರ್ಷಗಳಿಂದ ಕುತೂಹಲ ಕೆರಳಿಸಿದ್ದ ಈ...

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

by Shwetha
April 17, 2026
0

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯು ಕೇವಲ ರಾಜಕೀಯ ಸಂಘರ್ಷಕ್ಕೆ ಮಾತ್ರವಲ್ಲದೆ ಹಾಸ್ಯ ಮತ್ತು ಚುಚ್ಚುಮಾತಿನ ಪ್ರಸಂಗಗಳಿಗೂ ಸಾಕ್ಷಿಯಾಯಿತು. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram