ಮಾರ್ಚ್ ತಿಂಗಳಲ್ಲಿ 18.5 ಲಕ್ಷ ಅಕೌಂಟ್ ಗಳನ್ನ ಬ್ಯಾನ್ ಮಾಡಿದ ವಾಟ್ಸಪ್
ವಾಟ್ಸಾಪ್ ಮತ್ತೊಮ್ಮೆ ದೊಡ್ಡ ಕ್ರಮಕ್ಕೆ ಮುಂದಾಗಿದ್ದು ಒಂದೇ ತಿಂಗಳಲ್ಲಿ 18.5 ಲಕ್ಷ ಅಕೌಂಟ್ ಗಳನ್ನ ಬ್ಯಾನ್ ಮಾಡಿದೆ. ಐಟಿ ಆಕ್ಟ್ 2021 ರ ಅಡಿಯಲ್ಲಿ WhatsApp ಈ ಕ್ರಮ ಕೈಗೊಂಡಿದೆ. WhatsApp ನ ಹೊಸ ವರದಿಯ ಪ್ರಕಾರ, ಮಾರ್ಚ್ 2022 ರಲ್ಲಿ, 18.5 ಲಕ್ಷ ಭಾರತೀಯ ಖಾತೆಗಳನ್ನ ನಿಷೇಧಿಸಿದೆ.
ಮಾರ್ಚ್ 1 ರಿಂದ ಮಾರ್ಚ್ 31, 2022 ರ ನಡುವಿನಲ್ಲಿ ನೀತಿ ಉಲ್ಲಂಘನೆ ಮತ್ತು ಸ್ಪ್ಯಾಮ್ ವಿರುದ್ಧ WhatsApp ಕ್ರಮ ಕೈಗೊಂಡಿದೆ. ವರದಿಯ ಪ್ರಕಾರ, ಬಳಕೆದಾರರು 597 ಅಕೌಂಟ್ ಗಳ ಬಗ್ಗೆ ದೂರು ನೀಡಿದ್ದು, ಈ ಪೈಕಿ 407 ಅಕೌಂಟ್ ಗಳನ್ನ ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿದೆ. ಇನ್ನೂ ಪ್ರಾಡಕ್ಟ್ ಸಪೋರ್ಟ್ ಗೆ ಸಂಬಂಧಿಸಿದಂತೆ 37 ದೂರುಗಳು, ಸುರಕ್ಷತೆಗೆ ಸಂಬಂಧಿಸಿದಂತೆ 13 ಮತ್ತು ಇತರರಿಗೆ ಸಂಬಂಧಿಸಿದಂತೆ 28 ದೂರುಗಳು ದಾಖಲಾಗಿವೆ.
ನೀವು ಯಾವುದೇ ಅಕೌಂಟ್ ಗೆ ಸಂಬಂಧಿಸಿದಂತೆ ದೂರುಗಳನ್ನ ಹೊಂದಿದ್ದರೆ, ನೀವು grievance_officer_wa@support.whatsapp.com ನಲ್ಲಿ ದೂರು ನೀಡಬಹುದು. ಫೆಬ್ರವರಿ 2022 ರಲ್ಲಿ ಕಂಪನಿಯು 14 ಲಕ್ಷ ಖಾತೆಗಳನ್ನ ನಿಷೇಧಿಸಿತ್ತು.
WhatsApp ಈಗ ಸ್ಮಾರ್ಟ್ ಪೋನ್ ಗಳಲ್ಲಿ ಮಲ್ಟಿ ಡಿವೈಸ್ ಸಪೋರ್ಟ ಅನ್ನ ಬಿಡುಗಡೆ ಮಾಡಲಿದೆ. ಅಂದರೆ, ಹೊಸ ಅಪ್ಡೇಟ್ ನ ನಂತರ, ನೀವು ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ WhatsApp ಖಾತೆಯನ್ನ ಬಳಸಬಹುದು. ಪ್ರಸ್ತುತ, ಒಂದು ಅಕೌಂಟ್ ನ್ನ ಒಂದು ಮೊಬೈಲ್‌ನಲ್ಲಿ ಮಾತ್ರ ಬಳಸಬಹುದಾಗಿದೆ.
WABetaInfo ವರದಿಯ ಪ್ರಕಾರ, ಹೊಸ ವೈಶಿಷ್ಟ್ಯವು Android ನ ಬೀಟಾ ಆವೃತ್ತಿ 2.22.10.13 ನಲ್ಲಿ ಕಂಡುಬಂದಿದೆ. ಹೊಸ ಫೀಚರ್ಸ್ ನ ಸ್ಕ್ರೀನ್‌ಶಾಟ್ ಪಿಕ್ಚರ್ ಗಳು ಹರಿದಾಡಿವೆ. ಇದರಲ್ಲಿ ಒಂದು ಅಕೌಂಟ್ ನ ಹಲವು ಮೊಬೈಲ್ ಗಳಲ್ಲಿ ಯೂಸ್ ಮಾಡುವ ಸೌಲಭ್ಯವೂ ಒಂದು.








