ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಗೆ ಕೊಲೆ ಬೆದರಿಕೆ…..
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು, ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಮಾರಿಗುಡಿ ಸಮೀಪ ಅವರ ಕಾರನ್ನು ಅಡ್ಡಗಟ್ಟಿದಂತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ.
ಕಾಗೋಡು ತಿಮ್ಮಪ್ಪ ಫೌಂಡೇಶನ್ ವತಿಯಿಂದ ಸಾಗರ ತಾಲೂಕಿನ ವಿವಿಧೆಡೆ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ. ಮೇ 2ರಂದು ತ್ಯಾಗರ್ತಿಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಡಾ.ರಾಜನಂದಿನಿ ಕಾಗೋಡು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ವೇಳೆ ಸಾಗರಕ್ಕೆ ಹಿಂತಿರುಗುತ್ತಿದ್ದಾಗ ಯುವಕನೊಬ್ಬ ಡಾ. ರಾಜನಂದಿ ಅವರ ಕಾರು ಅಡ್ಡಗಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಅವರ ಕಾರು ಚಾಲಕ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಾ.ರಾಜನಂದಿನಿ ಅವರು ಆ ಕಾರಿನಲ್ಲಿ ಇರಲಿಲ್ಲ. ತಮ್ಮ ಕಾರು ಬಿಟ್ಟು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡಾ.ರಾಜನಂದಿನಿ ಅವರ ಕಾರಿನಲ್ಲಿ ಫೌಂಡೇಶನ್ನ ಇತರೆ ಪ್ರಮುಖರು ಸಾಗರಕ್ಕೆ ತೆರಳುತ್ತಿದ್ದರು. ತ್ಯಾಗರ್ತಿಯ ಮಾರಿಗುಡಿ ಸಮೀಪ ಮಂಜು ಎಂಬಾತ ಡಾ. ರಾಜನಂದಿನಿ ಅವರ ಕಾಡು ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದಾನೆ.