ಕೊರೊನಾ ನಿಯಂತ್ರಿಸಲು ಜನರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿರುವ ಚೀನಾ
ಚೀನಾ: ಚೀನಾದಲ್ಲಿ ಕೊರೊನಾರ್ಭಟ ಜೋರಾಗಿದ್ದು, ಅಲ್ಲಿನ ಕಮ್ಯುನಿಸ್ಟ್ ಸರಕಾರ ತನ್ನ ಜನರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಚೀನಾದ ಹಲವು ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಹಾಗೂ ಸೀಲ್ ಡೌನ್ ಹೇರಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಚೀನಾ ‘ಶೂನ್ಯ ಸಹನೆ’ ನೀತಿಯನ್ನು ಹೇರಿದೆ. ಇದರಿಂದ ಜನರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋಗಳಲ್ಲಿ ಆರೋಗ್ಯ ಅಧಿಕಾರಿಗಳ ಪಡೆ ಚಿಕಿತ್ಸೆ ಹೆಸರಿನಲ್ಲಿ ಜನರಿಗೆ ಹೊಡೆಯುತ್ತಿರುವುದು, ಮನೆಗಳಿಂದ ಬಲವಂತವಾಗಿ ಎಳೆದೊಯ್ಯುತ್ತಿರುವುದು, ಮನೆಯಿಂದ ಹೊರಬರದಂತೆ ಬಾಗಿಲುಗಳನ್ನು ವೆಲ್ಡ್ ಮಾಡಿ ಮುಚ್ಚುತ್ತಿರುವುದು, ಜೈಲಿನಂತಹ ಕಿಟಕಿಗಳಿರುವ ಕೋಣೆಗಳಿಗೆ ಅಟ್ಟಿ ಬೀಗ ಜಡಿದಿರುವುದು, ಸಾವಿರಾರು ಜನರನ್ನು ಅಮಾನವೀಯವಾಗಿ ಕ್ವಾರಂಟೈನ್ ಕ್ಯಾಂಪ್ ಗೆ ಎಳೆದೊಯ್ಯುತ್ತಿರುವುದು ಚೀನಾದ ಕರಾಳ ‘ಶೂನ್ಯ ಸಹನೆ ನೀತಿಯ ಭೀಕರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಚೀನಾ ಅನುಸರಿಸುತ್ತಿರುವ ನೀತಿಗಳು ಜನರ ಉಸಿರುಗಟ್ಟಿಸುತ್ತಿವೆ. ಶಾಂಘೈ ನಗರದಲ್ಲಿ ಪುರುಷ- ಮಹಿಳೆ, ಮಕ್ಕಳು- ವೃದ್ಧ ಎಂಬುದನ್ನು ನೋಡದೆ ಒಂದು ಕೋಣೆಯಳಗೆ ತಳ್ಳಿ ಬಾಗಿಲು ಜಡಿಯಲಾಗುತ್ತಿದೆ. ಸರಿಯಾದ ಆಹಾರ, ಅಗತ್ಯವಸ್ತುಗಳು ಸಿಗದೆ ಜನರು ಈ ಕ್ಯಾಂಪ್ ಗಳಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ.
ಇಂತಹ ಪರಿಪರಿಸ್ಥಿತಿ ಕೇವಲ ಶಾಂಘೈನಲ್ಲಿ ಮಾತ್ರವಲ್ಲದೇ, ಚೀನಾದ ಬಹುತೇಕ ನಗರಗಳಲ್ಲಿ ಇಂತಹದ್ದೇ ದೌರ್ಜನ್ಯಗಳು ನಡೆಯುತ್ತಿವೆ. ತಮ್ಮ ಮೇಲಿನ ದೌರ್ಜನ್ಯಗಳಿಂದ ಹತಾಶರಾಗಿರುವ ಜನರು ಶೂನ್ಯಕೋವಿಡ್ ನೀತಿಯನ್ನು ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸುತ್ತಿರುವುದನ್ನು ವಾಯ್ಸ್ ಆಫ್ ಏಪ್ರಿಲ್ ಎಂಬ ವಿಡಿಯೋ ತೆರೆದಿಡುತ್ತದೆ.
ಶಾಂಘೈ ಮೂಲದ ಸಂಗೀತರಾರ ಅಸ್ಟ್ರೋ ಎಂಬುವವರು ʼಹೊಸ ಗುಲಾಮರುʼ ಎಂಬ ಹಾಡು ಬಿಡುಗಡೆ ಮಾಡಿದ್ದು, ತನ್ನದೇ ನಾಗರೀಕರ ಮೇಲೆ ಚೀನಾ ನಡೆಸುತ್ತಿರುವ ಹಿಂಸಾಚಾರ, ಅವರ ಜೀವನವನ್ನು ತುಚ್ಛವಾಗಿ ಕಾಣುವ ಕಮ್ಯೂನಿಸ್ಟ್ ಸರ್ಕಾರದ ಕ್ರೂರತೆಯನ್ನು ತೆರೆದಿಡುತ್ತಿದೆ.