IPL 2022 : ಭಾರಿ ಶಾಟ್ಸ್ ಆಡೋಕೆ ಆಡಲ್ಲ.. ಆದ್ರೆ ಪವರ್ ಪ್ಲೇನಲ್ಲಿ ಮಿಂಚಬಲ್ಲೆ
ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಗುಜರಾತ್ ಟೈಟಾನ್ಸ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಆಸ್ಟ್ರೇಲಿಯನ್ ಬ್ಯಾಟರ್ ಮಾಥ್ಯೂ ವೇಡ್ ಬದಲಿಗೆ ವೃದ್ಧಿಪಾನ್ ಸಹಾ ಪ್ಲೇಯಿಂಗ್ ಇಲೆವೆಲ್ ಗೆ ಬಂದಿದ್ದಾರೆ.
SRH ವಿರುದ್ಧದ ಪಂದ್ಯದಲ್ಲಿ, ಸಹಾ ಅಮೋಘ ಅರ್ಧಶತಕ ಗಳಿಸಿದರು. 2008ರ ಮೊದಲ ಸೀಸನ್ ನಿಂದ ಅವರು ಐಪಿಎಲ್ನಲ್ಲಿ ಆಡುತ್ತಿದ್ದಾರೆ.
ಎಸ್ ಆರ್ ಹೆಚ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ವೃದ್ಧಿಮಾನ್ ಸಹಾ, ಚಿಕ್ಕಂದಿನಿಂದಲೂ ಶಾರ್ಟ್ ಫಾರ್ಮ್ಯಾಟ್ನಲ್ಲಿ ಆಡುವುದು ನನಗೆ ತುಂಬಾ ಇಷ್ಟ.+

ಕ್ರಿಸ್ ಗೇಲ್, ಆಂಡ್ರೆ ರಸೆಲ್, ಧೋನಿ ಭಾಯ್ ಅವರಂತಹ ದೊಡ್ಡ ಹೊಡೆತಗಳನ್ನು ನಾನು ಆಡಲು ಸಾಧ್ಯವಿಲ್ಲ.
ಆದರೆ ಪವರ್ಪ್ಲೇನಲ್ಲಿ ತಂಡಕ್ಕಾಗಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ನನ್ನಲ್ಲಿದೆ. ನಾನು ವೈಯಕ್ತಿಕ ದಾಖಲೆಗಳ ಬಗ್ಗೆ ಯೋಚಿಸಲ್ಲ.
ಇದುವರೆಗೆ ತಂಡದ ಯಶಸ್ಸಿನಲ್ಲಿ ನನ್ನ ಪಾತ್ರವನ್ನು ನಿರ್ವಹಿಸಿದ್ದೇನೆ.
ಮುಂಬರುವ ಪಂದ್ಯಗಳಲ್ಲಿಯೂ ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಈ ಋತುವಿನಲ್ಲಿ ಇದುವರೆಗೆ 5 ಪಂದ್ಯಗಳಲ್ಲಿ ವೃದ್ಧಿಮಾನ್ 154 ರನ್ ಗಳಿಸಿದ್ದಾರೆ. ipl-2022-i-have-potential-score-quick-runs-wriddhiman saha








