ಬಿಹಾರವನ್ನ ಮೇಲೆತ್ತಲು 3000 KM ಪಾದಯಾತ್ರೆ ಮಾಡುತ್ತೇವೆ – ಪ್ರಶಾಂತ್ ಕಿಶೋರ್
ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಬಿಹಾರವನ್ನು ಮೇಲೆತ್ತಲು ಅಕ್ಟೋಬರ್ 2 ರಿಂದ ‘ಪಾದಯಾತ್ರೆ’ ನಡೆಸುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ “ಜನ್ ಸೂರಜ್” (ಜನರ ಉತ್ತಮ ಆಡಳಿತ) ಚುನಾವಣಾ ಪ್ರಚಾರವನ್ನು ಪ್ರಶಾಂತ್ ಕಿಶೋರ್ ಪ್ರಕಟಿಸಿದ್ದಾರೆ. “ನಾನು ಬಿಹಾರದ ಬಹುಭಾಗವನ್ನು ತಲುಪುವ ಗುರಿಯೊಂದಿಗೆ ಅಕ್ಟೋಬರ್ 2 ರಂದು ಪಶ್ಚಿಮ ಚಂಪಾರಣ್ ಗಾಂಧಿ ಆಶ್ರಮದಿಂದ 3000-ಕಿಮೀ ಪಾದಯಾತ್ರೆಯನ್ನು [ರ್ಯಾಲಿ] ಪ್ರಾರಂಭಿಸುತ್ತೇನೆ. ” ಎಂದಿದ್ದಾರೆ.
“…ನಾವು ಜನರ ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಅವರ ಬಾಗಿಲು ತಟ್ಟುತ್ತೇವೆ” ಎಂದು ಪ್ರಶಾಂತ್ ಕಿಶೋರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಕ್ಷವನ್ನ ಸ್ಥಾಪಿಸುವ ಕುರಿತ ಪ್ರಶ್ನೆಗೆ ಇದೀಗ ಪಕ್ಷವನ್ನು ಪ್ರಾರಂಭಿಸುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
“ನಾನು ಬಿಹಾರದ ಸಮಸ್ಯೆಗಳ ಬಗ್ಗೆ ತಿಳಿದಿರುವ ಸುಮಾರು 17,000-18,000 ಜನರೊಂದಿಗೆ ಮಾತನಾಡಲಿದ್ದೇನೆ ಮತ್ತು ಅವರನ್ನು ಒಂದೇ ವೇದಿಕೆಯಲ್ಲಿ ತರಲು ಪ್ರಯತ್ನಿಸುತ್ತೇನೆ. ನಾವು ಆಗಸ್ಟ್-ಸೆಪ್ಟೆಂಬರ್ ಒಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.
“ಅಪೇಕ್ಷಿತ ಗುರಿಗಳನ್ನು ಸಾಧಿಸಲು ರಾಜಕೀಯ ವೇದಿಕೆಯನ್ನು ಪ್ರಾರಂಭಿಸಬೇಕು ಎಂದು ಅವರು ಭಾವಿಸಿದರೆ, ನಾವು ಅದನ್ನು ನಂತರ ನಿರ್ಧರಿಸುತ್ತೇವೆ. ಆದರೆ, ಅದು ಪ್ರಶಾಂತ್ ಕಿಶೋರ್ ಅವರ ಪಕ್ಷವಲ್ಲ, ಇದು ಜನರ ಪಕ್ಷವಾಗಿರುತ್ತದೆ” ಎಂದು ಪ್ರಶಾಂತ್ ಕಿಶೋರ್ ಹೇಳಿದರು.








