ಕೊರೊನಾ ರೂಪಾಂತರಿ ಪತ್ತೆ ಹಚ್ಚಲು BBMPಯಿಂದ ಹೊಸ ಪ್ರಯೋಗ
ಬೆಂಗಳೂರು: ನಗರದಲ್ಲಿ ಕೊರೊನಾ 4ನೇ ಅಲೆಯ ಆತಂಕ ಹೆಚ್ಚಾಗಿದ್ದು, ರೂಪಾಂತರಿಯನ್ನು ಪತ್ತೆ ಹಚ್ಚಲು ಬಿಬಿಎಂ ಹೊಸ ಮಾರ್ಗವೊಂದನ್ನು ಕಂಡುಕೊಂಡಿದೆ.
ದಕ್ಷಿಣಾ ಆಫ್ರಿಕಾ ಮಾದರಿಯಲ್ಲಿ ಹೊಸ ತಳಿ ಪತ್ತೆಗೆ ಬಿಬಿಎಂಪಿ (BBMP) ಮುಂದಾಗಿದ್ದು, ಕೊರೊನಾ 2ನೇ ಅಲೆ ವೇಳೆ ಪ್ರಯೋಗಿಸಿದ ಬಾಣವನ್ನೇ ಈಗ ಮತ್ತೆ ಪ್ರಯೋಗ ಮಾಡಲು ಮುಂದಾಗಿದೆ. ಕೊಳಚೆ ನೀರಿನಿಂದಲೂ ಕರೊನಾ ಹರಡುವ ಬೀತಿ ಇದೆ. ಹೀಗಾಗಿ ಬಿಬಿಎಂಪಿ ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವರಸ್ ಪತ್ತೆ ಹಚ್ಚಲು ಮುಂದಾಗಿದೆ. ಈ ಸಂಬಂಧ ಮಹಾನಗರ ಪಾಲಿಕೆ ವ್ಯಾಪ್ತಿಯ 34 STP ಕೊಳಚೆ ನೀರು ಪರೀಕ್ಷೆ ಮಾಡಲಾಗುತ್ತದೆ.
ಮೊದಲು ಕೊಳಚೆ ನೀರನ್ನು ಸಂಗ್ರಹಿಸಿ ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಹಿಂದೆ ದಕ್ಷಿಣ ಆಪ್ರಿಕಾದಲ್ಲಿ ಕೊಳೆಚೆ ನೀರಿನಲ್ಲಿ ರೂಪಾಂತರಿ ಪತ್ತೆಯಾಗಿತ್ತು. 15 ದಿನಗಳ ಹಿಂದೆಯೇ ಕೊಳಚೆ ನೀರು ಪರೀಕ್ಷೆ ಮಾಡಿದ ಬಳಿಕವೇ ಹೆಚ್ಚು ಜನರಿಗೆ ಸೋಂಕು ಹರಡುವುದನ್ನು ಅಲ್ಲಿ ತಪ್ಪಿಸಲಾಗಿತ್ತು.
ಈ ಹಿನ್ನಲೆಯಲ್ಲಿ ರೂಪಾಂತರಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ 34 STP ಗಳಿಂದ ನೀರು ಸಂಗ್ರಹಿಸಿ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.









