PSI ರವೀಶ್ ಮೇಲೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವಾಜ್…
ಮೂಡಿಗೆರೆ ತಾಲೋಕಿನ ಮಲ್ಲಂದೂರು ಠಾಣೆಗೆ ಹೊಸ ದಾಗಿ ಚಾರ್ಜ್ ತೆಗೆದುಕೊಳ್ಳಲು ಬಂದ ಪಿಎಸ್ ಐ ಮೇಲೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ದರ್ಪ ಮೆರೆದಿದ್ದಾರೆ. ಆಗಾಗ್ಗೆ ತನ್ನ ದರ್ಪ ತೋರಿಸುತ್ತಾ ವಿವಾದಕ್ಕೆ ಗುರಿಯಾಗುತ್ತಿರುವ ಶಾಸಕರು ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ಫೋನ್ ನಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಗೆ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ರವೀಶ್ಗೆ ಆವಾಜ್ ಹಾಕಿದ್ದು, ಏಕವಚನದಲ್ಲೇ ಅಸಾಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಾರೆ.
ಯಾರನ್ನ ಕೇಳಿ ಚಾರ್ಜ್ ತೆಗೆದುಕೊಂಡೆ, ಎಲ್ಲಿದ್ದೀಯಾ? ನಿನಿಗೆ ಬರ್ಬೇಡಾ ಅಂತ ಹೇಳಿದ್ದೆ ತಾನೆ? ನೀನು ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ, ಮರ್ಯಾದೆಯಿಂದ ವಾಪಸ್ ಹೋಗೋ ಲೇ, ನಾನು ಹೇಳಿದ ಹಾಗೆ ಕೇಳು, ಬೇಕಾದ್ರೆ ರೆಕಾರ್ಡ್ ಮಾಡ್ಕೊ, ನಾಳೆನೇ ನಿನ್ನ ಎತ್ತಂಗಡಿ ಮಾಡಿಸ್ತೇನೆ ಎಂದು ಗದರಿದ್ದಾರೆ.
ಐಜಿಗೆ ಎಷ್ಟು ಲಂಚ ಕೊಟ್ಟು ಬಂದಿದ್ದೀಯಾ ? ಯಾವನು ಐಜಿ? ಮೂಡಿಗೆರೆಗೆ ನಾನೇ ಎಲ್ಲ, ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ.








