ನಾಳೆ 70 ಸಂಚಾರಿ ಪಶು ಚಿಕಿತ್ಸಾಲಯಗಳ ಲೋಕಾರ್ಪಣೆ – ಪ್ರಭು ಚವ್ಹಾಣ
ಮೇ 7 ರಂದು ಬೆಂಗಳೂರಿನಲ್ಲಿ 70 ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ ಅನುದಾನದಲ್ಲಿ ಅಗತ್ಯ ತುರ್ತುಸೇವೆ ಒದಗಿಸಲು ರಾಜ್ಯಕ್ಕೆ 275 ಸಂಚಾರಿ ಪಶು ಚಿಕಿತ್ಸಾ ವಾಹನ ಒದಗಿಸಲಾಗಿದೆ. ಈ ಪೈಕಿ 70 ವಾಹನಗಳನ್ನು ಜಾನುವಾರು ಸೇವೆಗೆ ಬಳಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ದನ, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ ಸೇರಿದಂತೆ ಒಟ್ಟು 2.90 ಕೋಟಿ ಜಾನುವಾರುಗಳಿವೆ. ಜಾನುವಾರುಗಳಿರುವ ರೈತರ ಮನೆ ಬಾಗಿಲಿಗೆ ತುರ್ತು ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದ ಶೇ.100 ರ ಸಹಾಯಧನದಲ್ಲಿ 44 ಕೋಟಿ ರೂ. ಅನುದಾನದಲ್ಲಿ ರಾಜ್ಯಕ್ಕೆ ಹೊಸದಾಗಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಮಂಜೂರಾಗಿರುತ್ತವೆ. ಪ್ರತಿ ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ವಾಹನವನ್ನು ಒದಗಿಸಲಾಗುತ್ತದೆ.
INAUGURATION OF 70 VETERINARY AID VEHICLES TOMORROW








