ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ ‘ನಿಂತಿಲ್ಲ ಕನ್ವರ್ಲಾಲ್ ಕನವರಿಕೆ’ ಅರ್ಪಣೆ
ಬೆಂಗಳೂರು, ಮೇ 29: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 68ನೇ ಹುಟ್ಟುಹಬ್ಬ. ಕಳೆದ ವರ್ಷದಿಂದ ಭೌತಿಕವಾಗಿ ಮರೆಯಾಗಿ, ಅಭಿಮಾನಿಗ
ಳ ಹೃದಯ ಮಂದಿರದಲ್ಲಿ ಬೇರೂರಿರುವ ಕಲಿಯುಗ ಕರ್ಣನ ಹುಟ್ಟುಹಬ್ಬವನ್ನು ಅಭಿಮಾನಿಗಳು ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದರು. ಆದರೆ ಈ ಬಾರಿ ಲಾಕ್ ಡೌನ್ ನಿಂದಾಗಿ ಹುಟ್ಟುಹಬ್ಬದ ಸಂಭ್ರಮವಿಲ್ಲ. ಆದರೆ ಅಂಬಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಿಸಲು ಯೋಜನೆ ರೂಪಿಸಿದ್ದಾರೆ.
ನಟ ಸತೀಶ್ ನೀನಾಸಂ ಮತ್ತು ತಂಡ ಮಂಡ್ಯದ ಗಂಡಿನ ಜನ್ಮದಿನ ಪ್ರಯುಕ್ತ ವಿಶೇಷ ಹಾಡೊಂದನ್ನು ಅರ್ಪಿಸುತ್ತಿದ್ದಾರೆ.
ನವೀನ್ ಸಜ್ಜು ಅವರ ಸಂಗೀತ ನಿರ್ದೇಶನದಲ್ಲಿ ‘ನಿಂತಿಲ್ಲ ಕನ್ವರ್ ಲಾಲ್ ಕನವರಿಕೆ’ ಎಂಬ ಹಾಡು ಸಿದ್ಧವಾಗಿದ್ದು, ಬಹದ್ದೂರ್’ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಈ ಹಾಡು ರಚಿಸಿದ್ದಾರೆ. ನೀನಾಸಂ ಸತೀಶ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ‘ಡೆಡಿಕೇಟೆಡ್ ಟು ನಮ್ಮೂರ ಹಮ್ಮೀರನೆಂಬ ಮಂಡ್ಯದ ದೊರೆ’ ಎಂದು ಬರೆದಿರುವ ಪೋಸ್ಟರ್ ನನ್ನು ಹಂಚಿಕೊಂಡಿದ್ದು, ಈ ಗೀತೆಯು ನಾಳೆ ಬೆಳಗ್ಗೆ 9 ಗಂಟೆಗೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ.
ಲಾಕೌ ಡೌನ್ ಹಿನ್ನೆಲೆಯಲ್ಲಿ ಕನ್ವರ್ ಲಾಲ್ ನ ಅಭಿಮಾನಿಗಳ ಅಭಿಮಾನ ವಿಶೇಷ ಹಾಡಿನ ರೂಪದಲ್ಲಿ ಹೊರ ಬರುತ್ತಿದೆ.






