ಇಂದು ಮುಂಬೈ vs ಗುಜರಾತ್ : ಕೊನೆಯ ಪಂದ್ಯದಗಳನ್ನ ಗೆಲ್ಲುವ ತವಕದಲ್ಲಿ ರೋಹಿತ್ ಪಡೆ..
ಇಂದು ಸಂಜೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಪವರ್ ಹಿಟ್ಟರ್ ಗಳಿಂದ ತುಂಬಿ ತುಳುಕುತ್ತಿದ್ದರೂ ಪಾಯಿಂಟ್ ಪಟ್ಟಿಯಲ್ಲಿ ದೊಡ್ಡ ವ್ಯತ್ಯಾಸವಿದೆ.
ಅಗ್ರಸ್ಥಾನದಲ್ಲಿರುವ ಗುಜರಾತ್ ಪ್ಲೇ ಆಫ್‌ಗೆ ಬಹುತೇಕ ಅರ್ಹತೆ ಪಡೆದಿದ್ದರೆ, ಮುಂಬೈ ಕೊನೆಯ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನವನ್ನು ಸೋಲಿಸಿ MI ಈ ಋತುವಿನ ಮೊದಲ ಗೆಲುವನ್ನು ಪಡೆದುಕೊಂಡಿದೆ, ಆದರೆ ಗುಜರಾತ್ ಕೊನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಹೀನಾಯ ಸೋಲು ಅನುಭವಿಸಿತು.
ಪಂಜಾಬ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಉದ್ದೇಶಪೂರ್ವಕವಾಗಿ ನಿರ್ಧರಿಸಿದ್ದೆ ಎಂದು ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಅವರು ತಮ್ಮ ಆಟಗಾರರು ಕಷ್ಟಕರ ಸಂದರ್ಭಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಬಯಸಿದ್ದರು. ಪರಿಣಾಮ ಪಂಜಾಬ್ 16 ಓವರ್ ಗಳಲ್ಲೇ ಗುರಿ ಬೆನ್ನಟ್ಟಿತು. ಆದಾಗ್ಯೂ, ಈ ಪಂದ್ಯದಿಂದ ತಮ್ಮ ತಂಡ ಪಾಠ ಕಲಿಯುತ್ತದೆ ಮತ್ತು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂದು ಹಾರ್ದಿಕ್ ನಂತರ ಹೇಳಿದ್ದರು.
ರಾಹುಲ್ ತೆವಾಟಿಯಾ ಉತ್ತಮ ಮ್ಯಾಚ್ ಫಿನಿಶರ್, ಆದರೆ ತಂಡ ಮೊದಲು ಬ್ಯಾಟ್ ಮಾಡಿದಾಗ ಅವರ ಬ್ಯಾಟಿಂದ ರನ್ ಹರಿದುಬಂದಿಲ್ಲ. ಮೊಹಮ್ಮದ್ ಶಮಿ ಎಸೆತಗಳಲ್ಲಿ ನಿಧಾನವಾಗಿ ಮೊನಚು ಕಳದುಕೊಳ್ಳುತ್ತಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಇವರ ಬೌಲಿಂಗ್‌ನಲ್ಲಿ ಬಲವಾಗಿ ಹೊಡೆದಿದ್ದರು. 117 ಮೀಟರ್‌ಗಳ ಭರ್ಜರಿ ಸಿಕ್ಸರ್ ಸಹ ಶಮಿ ಬೌಲಿಂಗನಲ್ಲೇ ಬಂದಿತ್ತು. ಮುಂಬೈ ಬೆಂಚ್ ಬಲವನ್ನು ಪ್ರಯತ್ನಿಸಬಹುದು
ಮುಂಬೈ ಇಂಡಿಯನ್ಸ್‌ಗೆ ಪ್ಲೇ ಆಫ್ ನಿಂದ ಹೊರಗುಳಿಯುವುದು ಪಕ್ಕಾ ಆಗಿದೆ. ಇಲ್ಲಿಯವರೆಗೆ ಆಡಲು ಅವಕಾಶ ಸಿಗದ ಆಟಗಾರರಿಗೂ ಅವಕಾಶ ನೀಡುವುದಾಗಿ ನಾಯಕ ರೋಹಿತ್ ಶರ್ಮಾ ಈಗಾಗಲೇ ಸೂಚಿಸಿದ್ದಾರೆ. .