RR vs PBKS Match | ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಯಿಂಗ್ 11
ಇಂಡಿಯನ್ ಪ್ರಿಮಿಯರ್ ಲೀಗ್ ನ 52 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ – ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದೆ.
ರಾಜಸ್ಥಾನ ಆರಂಭದಲ್ಲಿ ಅಬ್ಬರಿಸಿ, ಈಗ ಸೋಲಿನ ಸಂಕಟ ಎದುರಿಸುತ್ತಿದೆ.
ಪಂಜಾಬ್ ಕಿಂಗ್ಸ್ ಆರಂಭದಲ್ಲಿ ತೋರಿದ ಪ್ರದರ್ಶನವನ್ನು ಮುಂದುವರೆಸಿಲ್ಲ.
ಕೊನೆಯ 5 ಪಂದ್ಯಗಳಲ್ಲಿ ಪಂಜಾಬ್ 3 ಬಾರಿ ಸೋಲಿನ ಕಹಿಯುಂಡಿದೆ.
ರಾಜಸ್ಥಾನ ರಾಯಲ್ಸ್ ಸತತ 2 ಸೋಲುಗಳನ್ನು ಕಂಡಿದೆ.
ಹೀಗಾಗಿ ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ಸ್ ಮತ್ತಷ್ಟು ಹತ್ತಿರವಾಗುವ ಪ್ಲಾನ್ ನಲ್ಲಿದೆ ರಾಜಸ್ಥಾನ್ ರಾಯಲ್ಸ್ ತಂಡ.
ಸಂಜು ಸ್ಯಾಮ್ ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡ ಈ ಸೀಸನ್ ನಲ್ಲಿ ಈವರೆಗೂ 10 ಪಂದ್ಯಗನ್ನಾಡಿದೆ.
ಈ ಪೈಕಿ ಆರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ.
ಇದರೊಂದಿಗೆ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಅಂದಹಾಗೆ ರಾಜಸ್ಥಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಹೋರಾಟ ನಡೆಸಿತ್ತು.
ಇದರಲ್ಲಿ ಕೆಕೆಆರ್ ತಂಡ ಏಳು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ರಾಯಲ್ಸ್ ಪರ ಸಂಜು ಸ್ಯಾಮ್ ಸನ್ 54 ರನ್, ಹಿಟ್ಮೇಯರ್ 27 ರನ್ ಗಳಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಬಲಿಷ್ಠವಾಗಿದೆ.
ಆದ್ರೆ ದೇವದತ್ ಪಡಿಕಲ್, ಕರುಣ್ ನಾಯರ್ ಅಸ್ಥಿರ ಆಟ ತಂಡದ ಮೈನಸ್ ಪಾಯಿಂಟ್ ಆಗಿದೆ.
ಉನ್ನುಳಿದಂತೆ ಜೋಸ್ ಬಟ್ಲರ್ ಬ್ಯಾಟಿಂಗ್ ಅಬ್ಬರ, ಸಂಜು ಸ್ಯಾಮ್ಸನ್ ಸಮಯೋಜಿತ ಆಟ, ಹಿಟ್ಮೇಯರ್ ವಿಧ್ವಂಸಕ ಬ್ಯಾಟಿಂಗ್ ತಂಡದ ಯಶಸ್ಸಿಗೆ ಕಾರಣವಾಗಿದೆ. ಇವರ ಜೊತೆಗೆ ರಿಯಾನ್ ಪರಾಗ್ ಮಿಂಚಬೇಕಿದೆ.
ಇನ್ನ ಬೌಲಿಂಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅತ್ಯುತ್ತಮವಾಗಿದೆ.
ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಾಲ್ ವಿಕೆಟ್ ಬೇಟೆಯಾಡುತ್ತಿರೋದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಟ್ರೆಂಟ್ ಬೋಲ್ಟ್ ತಂಡಕ್ಕೆ ಆರಂಭದಲ್ಲಿಯೇ ಬ್ರೇಕ್ ತಂದುಕೊಡುತ್ತಿದ್ದಾರೆ.
ಪ್ರಸಿದ್ಧ್ ಕೃಷ್ಣ, ಕುಲ್ ದೀಪ್ ಸೇನ್ ಎದುರಾಳಿಗಳನ್ನು ಕಾಡುತ್ತಿದ್ದಾರೆ.
ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (c & wk), ಕರುಣ್ ನಾಯರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಸೇನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್
RR vs PBKS Match Rajasthan Royals team Playing 11