ಶೌಚಾಲಯದಲ್ಲಿ ರಹಸ್ಯ ಬಾಗಿಲು, ಹೊಳಲ್ಕೆರೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಯುವತಿಯನ್ನ ರಕ್ಷಿಸಲಾಗಿದ್ದು ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.
ನಗರದ ಪ್ರಜ್ವಲ್ ಲಾಡ್ಜ್ ನಲ್ಲಿ ಹೊರ ರಾಜ್ಯದ ಯುವತಿಯರನ್ನ ಬಳಸಿಕೊಂಡು ವೇಶ್ಯಾವಾಟಿಕೆ ಧಂದೆ ನಡೆಸಲಾಗುತ್ತಿತ್ತು. ಶೌಚಾಲಯದ ಗೋಡೆಗಳಿಗೆ ರಹಸ್ಯ ಬಾಗಿಲುಗಳನ್ನ ನಿರ್ಮಿಸಿ ಪ್ರವೇಶಕ್ಕೆ ವ್ಯವಸ್ಥೆ ಮಾಡಿದ್ದರು. ಮೈಸೂರಿನ ಒಡನಾಡಿ ಸಂಸ್ಥೆಯ ಸಹಯೋಗದ ಮೇರೆಗೆ ಚಿತ್ರದುರ್ಗದ ಡಿಸಿಐಬಿ ಇನ್ಸ್ಪೆಕ್ಟರ್ ಕಿರಣ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಯೋಜಿತ ರೀತಿಯಲ್ಲಿ ಈ ದಂಧೆ ನಡೆಯುತ್ತಿದ್ದು, ಲಾಡ್ಜ್ ಹೊರಗಡೆ ಒಬ್ಬ ಹಾಗೂ ಮೊದಲ ಮಹಡಿಯ ರಿಸಪ್ಷನಿಸ್ಟ್ ಜಾಗದಲ್ಲಿ ಮೂವರನ್ನು ಕಣ್ಗಾವಲಿಗೆ ಇಟ್ಟುಕೊಳ್ಳಲಾಗಿತ್ತು. ಪೊಲೀಸರು ಬರುವುದು ಗೊತ್ತಾದ ಕೂಡಲೇ ರಿಸಪ್ಷನಿಸ್ಟ್ ಕಾಲ ಕೆಳಗೆ ಇದ್ದ ಸ್ವಿಚ್ ಒತ್ತಿದ ತಕ್ಷಣ ಅದು ಮೂರನೇ ಮಹಡಿಯಲ್ಲಿ ದೇವರ ನಾಮದೊಂದಿಗೆ ರಿಂಗ್ ಆಗುತ್ತೆ. ಕೂಡಲೇ ಯುವತಿಯರು ಟಾಯ್ಲೆಟ್ ರೂಮ್ ಒಳಗೆ ಹೋಗಿ ಟೈಲ್ಸ್ ಮೂಲಕ ಮಾಡಲ್ಪಟ್ಟ ಬಾಗಿಲನ್ನು ತೆಗೆದು ಅವಿತುಕೊಳ್ಳುತ್ತಿದ್ದದ್ದು ಗೊತ್ತಾಗಿದೆ.
ಇಲ್ಲಿಯ ರೈತರನ್ನೇ ಟಾರ್ಗೆಟ್ ಮಾಡಿಕೊಂಡು ಈ ದಂಧೆ ನಡೆಸುತ್ತಿರುವುದು ಗೊತ್ತಾಗಿದೆ.