ADVERTISEMENT
Monday, June 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

RCB vs SRH | ಆರ್ ಸಿಬಿ ತಂಡದಲ್ಲಿ ಬದಲಾವಣೆ ಆಗುತ್ತಾ..?

Mahesh M Dhandu by Mahesh M Dhandu
May 8, 2022
in Newsbeat, Sports, ಕ್ರಿಕೆಟ್
ipl-2022-rcb qualify for playoffs 2022 saaksha tv

ipl-2022-rcb qualify for playoffs 2022 saaksha tv

Share on FacebookShare on TwitterShare on WhatsappShare on Telegram

RCB vs SRH | ಆರ್ ಸಿಬಿ ತಂಡದಲ್ಲಿ ಬದಲಾವಣೆ ಆಗುತ್ತಾ..?

ಇಂಡಿಯನ್ ಪ್ರಿಮಿಯರ್ ಲೀಗ್ ನ 54 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ಗೆಲುವಿವಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ.  

Related posts

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

May 31, 2026
ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

May 31, 2026

ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಕಳೆದ ಬಾರಿ ಸೆಣಸಾಡಿದ್ದಾಗ ಆರ್ ಸಿಬಿ ತಂಡ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು.  ಎಸ್ ಆರ್ ಹೆಚ್ 9 ವಿಕೆಟ್ ಗಳಿಂದ ಜಯ ಸಾಧಿಸಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಬೆಂಗಳೂರು ತಂಡ.

ಫಾಫ್ ಡುಪ್ಲಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್ ನಲ್ಲಿ 11 ಪಂದ್ಯಗಳನ್ನಾಡಿದೆ. ಇದರಲ್ಲಿ 6 ಪಂದ್ಯಗಳನ್ನು ಗೆದ್ದು ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ  12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಆರ್ ಸಿಬಿ 13 ರನ್ ಗಳಿಂದ ಜಯ ಸಾಧಿಸಿತ್ತು.  ಆರ್ ಸಿಬಿ ಪರ ಮಹಿಪಾಲ್ ಲೋಮ್ರೋರ್ 42 ರನ್ ಗಳಿಸಿದ್ರು. ಹೀಗಾಗಿ ಇದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ ಆರ್ ಸಿಬಿ.

rcb-vs-srh-Royal Challengers Bangalore playing 11 saaksha tv
rcb-vs-srh-Royal Challengers Bangalore playing 11 saaksha tv

ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಚಾರಕ್ಕೆ ಬಂದರೇ ತಂಡದ ಗೆಲುವು ನಿಂತಿರೋದೇ ಸಾಂಘಿಕ ಆಟದ ಮೇಲೆ. ಬ್ಯಾಟಿಂಗ್, ಬೌಲಿಂಗ್ ವಿಭಾಗ ಕ್ಲಿಕ್ ಆದ್ರೆ ತಂಡಕ್ಕೆ ಗೆಲುವು ಖಚಿತ.  ಕಳೆದ ಪಂದ್ಯದಲ್ಲಿ ಆರಂಭಿಕರಾಗಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿಸ್ ಉತ್ತಮ ಜೊತೆಯಾಟ ನೀಡಿದ್ರು, ಆದ್ರೆ ವಿರಾಟ್ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಚೆನ್ನಾಗಿಲ್ಲ. ಮ್ಯಾಕ್ಸ್ ವೆಲ್ ಬ್ಯಾಟಿಂಗ್ ನಲ್ಲಿ ಸದ್ದು ಮಾಡುತ್ತಿಲ್ಲ. ಆದ್ರೆ ಯುವ ಬ್ಯಾಟರ್ ಗಳಾದ ರಜತ್ ಪಟಿದಾರ್, ಮಹಿಪಾಲ್ ಲೋಮ್ರೋರ್ ಅದ್ಭುತವಾಗಿ ಆಡುತ್ತಿದ್ದಾರೆ. ಇದು ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಕೆಲ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಶಹಬ್ಬಾಸ್ ಮೇಲೆ ತಂಡಕ್ಕೆ ನಂಬಿಕೆ ಇದೆ.

ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೇ ಮಹ್ಮದ್ ಸಿರಾಜ್ ದುಬಾರಿಯಾಗುತ್ತಿರೋದು ತಂಡಕ್ಕೆ ತಲೆನೋವಾಗಿದೆ. ಇವರನ್ನು ಹೊರತು ಪಡಿಸಿದ್ರೆ ಜೋಸ್ ಹೆಜಲ್ ವುಡ್, ಹರ್ಷಲ್ ಪಟೇಲ್ ಮ್ಯಾಚ್ ವಿನ್ನಿಂಗ್ಸ್ ಸ್ಪೆಲ್ ಮಾಡುತ್ತಿದ್ದಾರೆ. ಹಸರಂಗ ವಿಕೆಟ್ ಬೇಟೆಯಾಗುತ್ತಿದ್ದಾರೆ. ಐದನೇ ಬೌಲರ್ ಆಗಿ ಮ್ಯಾಕ್ಸಿ, ಶಹಬ್ಬಾಸ್ ಕಮಾಲ್ ಮಾಡುತ್ತಿದ್ದಾರೆ.     

 ಪ್ಲೇಯಿಂಗ್ ಇಲೆವೆನ್

ವಿರಾಟ್ ಕೊಹ್ಲಿ

ಫಾಫ್ ಡುಪ್ಲಸಿಸ್

ಗ್ಲೇನ್ ಮ್ಯಾಕ್ಸ್ ವೆಲ್

ರಜತ್ ಪಟಿದಾರ್

ಮಹಿಪಾಲ್ ಲೋಮ್ರೋರ್

ದಿನೇಶ್ ಕಾರ್ತಿಕ್

ಶಹಬ್ಬಾಸ್ ಅಹ್ಮದ್

ವನಿಂದು ಹಸರಂಗ

ಹರ್ಷಲ್ ಪಟೇಲ್

ಜೋಸ್ ಹೆಜಲ್ ವುಡ್

ಮೊಹ್ಮದ್ ಸಿರಾಜ್  

rcb-vs-srh-Royal Challengers Bangalore playing 11

Tags: #Saaksha TVCricketRCBSHR
ShareTweetSendShare
Join us on:

Related Posts

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡನೇ ಐಪಿಎಲ್ ಪ್ರಶಸ್ತಿ: ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ಮಣಿಸಿದ ಆರ್ ಸಿ ಬಿ

by Shwetha
May 31, 2026
0

ಐಪಿಎಲ್ 2026ರ ಬಹುನಿರೀಕ್ಷಿತ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ...

ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

ಡಿಕೆಶಿ ಮನೆಗೆ ಸತೀಶ್ ಜಾರಕಿಹೊಳಿ ಎಂಟ್ರಿ! ಸಾಹುಕಾರ್ ಎಸೆದ ಡಬಲ್ ಕಾರ್ಡ್ ಹಿಂದೆ ಅಡಗಿದೆಯಾ ಬಿಗ್ ಪ್ಲಾನ್?

by Shwetha
May 31, 2026
0

ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಈಗ ಸಂಪುಟ ಕಸರತ್ತಿನ ಸುನಾಮಿ ಎದ್ದಿದೆ. ದೆಹಲಿಯಿಂದ ಸಚಿವರ ಪಟ್ಟಿಯನ್ನ ಹೊತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ, ಅವರ ಸದಾಶಿವನಗರದ ನಿವಾಸ...

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

40 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್

by Shwetha
May 31, 2026
0

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, 40,067 ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಕೃತ ಆದೇಶ...

ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

ಕರ್ನಾಟಕಕ್ಕೆ ಹೊಸ ಸಾರಥಿ : ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿ ಒಗ್ಗಟ್ಟು ಪ್ರದರ್ಶಿಸಿದ ಸಿದ್ದು ಡಿಕೆಶಿ ಜೋಡಿ

by Shwetha
May 31, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಕುತೂಹಲಕ್ಕೆ ತೆರೆ ಬಿದ್ದಿದ್ದು, ನೂತನ ಸರ್ಕಾರ ರಚನೆಯ ಪ್ರಕ್ರಿಯೆಗಳು ಅಧಿಕೃತವಾಗಿ ಚುರುಕುಗೊಂಡಿವೆ. ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್...

ನೀಟ್ ಪರೀಕ್ಷಾ ವಿಧಾನದಲ್ಲಿ ಭಾರಿ ಬದಲಾವಣೆ.. NTA ಮಹತ್ವದ ಘೋಷಣೆ

ನೀಟ್ ಪರೀಕ್ಷಾ ವಿಧಾನದಲ್ಲಿ ಭಾರಿ ಬದಲಾವಣೆ.. NTA ಮಹತ್ವದ ಘೋಷಣೆ

by Shwetha
May 31, 2026
0

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆಯೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಘೋಷಣೆ ಮಾಡಿದೆ. ಮುಂದಿನ ವರ್ಷದಿಂದ NEET ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram