Babar Azam | ಆತ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮೆನ್
ನ್ಯೂಜಿಲೆಂಡ್ನ ಮಾಜಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ವೆಟ್ಟೋರಿ ಅವರು ಅಜಮ್ ಅವರನ್ನು ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಶ್ಲಾಘಿಸಿದ್ದಾರೆ. ಮತ್ತೊಂದೆಡೆ, ಬಾಬರ್ ಐಸಿಸಿ ODI ಮತ್ತು T20 ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಬರ್ ಮಿಂಚಿದ್ದು, ಬಾಬರ್ ಮೂರು ಪಂದ್ಯಗಳಲ್ಲಿ 276 ರನ್ ಗಳಿಸಿದ್ದಾರೆ.
ಈ ಬಗ್ಗೆ ಡೀನಿಯಲ್ ವಿಟ್ಟೋರಿ ಒಂದು ಸ್ಪೋರ್ಟ್ಸ್ ಛಾನಲ್ ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿ, “ಕ್ರಿಕೆಟ್ನ ಮೂರು ಸ್ವರೂಪಗಳು ವಿಭಿನ್ನವಾಗಿವೆ.
ಎಲ್ಲಾ ಮೂರು ಫಾರ್ಮ್ಯಾಟ್ ಗಳಲ್ಲಿ ಮಿಂಚುವುದು ತುಂಬಾ ಕಷ್ಟ. ಆದರೆ ಬಾಬರ್ ಅಜಮ್ ಎಲ್ಲಾ ಮೂರು ಸ್ವರೂಪಗಳಲ್ಲಿ ಮಿಂಚುತ್ತಾರೆ.
ಬಾಬರ್ ಪ್ರಸ್ತುತ ವಿಶ್ವದ ಅತ್ಯುತ್ತಮ ಆಟಗಾರ” ಎಂದು ಬಣ್ಣಿಸಿದ್ದಾರೆ. babar-azam-best-batter-world-moment








